ಮಂಡ್ಯ:- ಕುರಿಗಾಹಿಗಳ ಮೇಲೆ ಚಿರತೆ ದಾಳಿ ನಡೆದಿದ್ದು, ಓರ್ವನಿಗೆ ಗಂಭೀರ ಗಾಯವಾದ ಘಟನೆ ಮಂಡ್ಯ ತಾಲ್ಲೂಕಿನ ಕಿರಗಂದೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದಲ್ಲಿ ಜಮೀನೊಂದರಲ್ಲಿ ಕುರಿಗಾಹಿಗಳು ಕುರಿ ಮಂದೆ ಹಾಕಿಕೊಂಡಿದ್ದರು. ಕುರಿ, ಮೇಕೆ ಮೇಲೆ ದಾಳಿ ಮಾಡುವ ವೇಳೆ ಕುರಿಗಾಹಿಗಳ ಮೇಲು ಚಿರತೆ ದಾಳಿ ನಡೆದಿದೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಮತ್ತೊಬ್ಬ ಚಿರತೆ ದಾಳಿಯಿಂದ ಬಚಾವ್ ಆಗಿದ್ದಾನೆ.
ಗಾಯಗೊಂಡ ಕುರಿಗಾಹಿಯನ್ನ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಗೆ ದಾಖಲು ಮಾಡಲಾಗಿದೆ. ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ತಕ್ಷಣವೇ ಚಿರತೆ ಸೆರೆಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.






