ಕೂದಲು ಉದುರುವುದಕ್ಕೆ ಮನೆ ಮದ್ದು ಅಲೋವೆರಾ.!

Date:

ತಲೆಯಲ್ಲಿ ಹೊಟ್ಟು ಆಗಿರಲಿ, ಕೂದಲು ಉದುರುತ್ತಿರಲಿ ಹೀಗೆ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ ಕೂದಲ ಆರೈಕೆ ಮಾಡುತ್ತದೆ ಈ ಅಲೋವೆರಾ. ಕೂದಲ ಪೋಷಣೆಯಲ್ಲಿ ಅಲೋವೆರಾ ಜೆಲ್‌ ಪ್ರಮುಖವಾಗಿದೆ. ಅಲೋವೆರಾ ನೈಸರ್ಗಿಕ ಪರಿಹಾರವಾಗಿದ್ದು, ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ನೆತ್ತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಹೇರ್ ಆಯಿಲ್ ಮಸಾಜ್: ವರದಿ ಪ್ರಕಾರ, ಕೂದಲಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿನ ಸಮಸ್ಯೆಗಳು ದೂರವಾಗುತ್ತವೆ. ಎಣ್ಣೆ ಮಸಾಜ್ ಡ್ಯಾಂಡ್ರಫ್ ಮತ್ತು ಒಣ ಕೂದಲು ಸಮಸ್ಯೆ ತೊಡೆದುಹಾಕಲು ಸಹಾಯ ಮಾಡುತ್ತದೆ. ಈ ಉದ್ದೇಶದಿಂದ ಅನೇಕ ಮಂದಿ ಕೂದಲಿಗೆ ಸಾಕಷ್ಟು ರೀತಿಯ ಎಣ್ಣೆಗಳನ್ನು ಬಳಸುತ್ತಾರೆ. ಆದರೆ ಇನ್ಮುಂದೆ ಕೂದಲಿಗೆ ಅಲೋವೆರಾ ಎಣ್ಣೆಯನ್ನು ಬಳಸಿ. ಇದು ಕೂದಲು ಉದುರುವಿಕೆ ಸಮಸ್ಯೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೇ, ನಿಮ್ಮ ಕೂದಲನ್ನು ಶೈನ್ ಆಗಿಸುತ್ತದೆ. ಹಾಗಾದ್ರೆ ಈ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಎಂದು ನಾವಿಂದು ತಿಳಿಯೋಣ

ಅಲೋವೆರಾ ಜೆಲ್: ಅಲೋವೆರಾ ಕೂದಲಿನ ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳಿಗೆ ಒಳ್ಳೆಯದು. ಇದರಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಕೂದಲಿಗೆ ಹೊಳಪನ್ನು ನೀಡುತ್ತದೆ. ಜೊತೆಗೆ ಕೂದಲನ್ನು ಮೃದುವಾಗಿಸುತ್ತದೆ. ಉತ್ತಮ ಕಂಡೀಷನಿಂಗ್ ಗುಣ ಹೊಂದಿರುವ ಈ ಎಣ್ಣೆಯನ್ನು ಅಲೋವೆರಾದೊಂದಿಗೆ ಬಳಸುವುದು ಒಳ್ಳೆಯದು.

ತಯಾರಿಸುವುದ ಹೇಗೆ?: ಮೊದಲು ಶುದ್ಧ ತೆಂಗಿನ ಎಣ್ಣೆಯನ್ನು ತೆಗೆದುಕೊಳ್ಳಿ. ಇದಕ್ಕಾಗಿ ಅಲೋವೆರಾ ಜೆಲ್ 2 ಅನ್ನು ಹೊರ ತೆಗೆದು ಅದನ್ನು ಮೃದುಗೊಳಿಸಿ.ಈಗ ಕಬ್ಬಿಣದ ಪ್ಯಾನ್ ತೆಗೆದುಕೊಂಡು ತೆಂಗಿನ ಎಣ್ಣೆ ಹಾಗೂ ಅಲೋವೆರಾ ಜೆಲ್ ಬೆರೆಸಿ ಕುದಿಸಿ. ಈಗ ಎಲ್ಲಾ ನೀರು ಎಣ್ಣೆಯಲ್ಲಿ ಆವಿಯಾಗುವವರೆಗೆ ಕುದಿಸಿ. ಆ ಪಾತ್ರೆಯನ್ನು ಒಂದು ದಿನ ಬಿಟ್ಟು ಮರುದಿನ ಸೋಸಿದರೆ ಎಣ್ಣೆ ಸಿದ್ಧವಾಗುತ್ತದೆ.

ಹೇಗೆ ಹಚ್ಚುವುದು: ಯಾರಾದ ಎಣ್ಣೆಯನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ನೆತ್ತಿಯ ಮೇಲೆ ಹಚ್ಚಿ. ದಿನವಿಡೀ ಹಾಗೆ ಬಿಡಿ. ಒಂದು ಗಂಟೆ ಬಿಟ್ಟರೂ ಪರವಾಗಿಲ್ಲ. ನಂತರ ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ ಮತ್ತು ಉದ್ದವಾಗಿ ಬೆಳೆಯುತ್ತದೆ.

ದಪ್ಪ ಕೂದಲಿಗೆ ಟಿಪ್ಸ್: ಮಲಗುವ ಮುನ್ನ ನಿಮ್ಮ ಕೂದಲನ್ನು ಚೆನ್ನಾಗಿ ಬಾಚಿಕೊಳ್ಳಿ. ನಿಮ್ಮದು ಉದ್ದ ಕೂದಲಾಗಿದ್ದರೆ ಜಡೆ ಹಾಕಿಕೊಳ್ಳಿ. ಹೀಗೆ ಮಾಡುವುದರಿಂದ ಕೂದಲು ದುರ್ಬಲವಾಗುವುದಿಲ್ಲ ಮತ್ತು ಒಣಗುವುದಿಲ್ಲ.

Share post:

Subscribe

spot_imgspot_img

Popular

More like this
Related

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆ ಬಾಗಲಕೋಟೆ: ಕೂಡಲಸಂಗಮ...

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ

ಪ್ರಧಾನಿ ಮೋದಿ ಇಂದು ಸಂಜೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ನವದೆಹಲಿ: ಪ್ರಧಾನಿ ನರೇಂದ್ರ ಮೋದಿ...

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಗಳೂರು:...

ಬಿಳಿ, ಕೆಂಪು, ಗುಳ್ಳೆಗಳು: ನಾಲಿಗೆಯ ಬದಲಾವಣೆಗಳ ಅರ್ಥ ಏನು?

ಬಿಳಿ, ಕೆಂಪು, ಗುಳ್ಳೆಗಳು: ನಾಲಿಗೆಯ ಬದಲಾವಣೆಗಳ ಅರ್ಥ ಏನು? ಆಹಾರ ಸರಿಯಾಗಿ ಜೀರ್ಣವಾದರೆ...