ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಸೂಪರ್ ಹಿಟ್ ಚಿತ್ರಗಳಲ್ಲಿ ಒಂದು ಕೆಂಪೇಗೌಡ. ಸುದೀಪ್ ಮತ್ತು ರಾಗಿಣಿ ನಟನೆಯ ಆ ಸಿನಿಮಾ 2011ರಲ್ಲಿ ರಿಲೀಸ್ ಆಗಿತ್ತು. ಶಂಕರ್ ಗೌಡ ಬಂಡವಾಳ ಹಾಕಿದ್ದ ಆ ಸಿನಿಮಾಕ್ಕೆ ಸುದೀಪ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದರು.
ಈಗ ಕೆಂಪೇಗೌಡ 2 ಬರಲಿದೆ . ಇದು ಎಲ್ಲರಿಗೂ ಗೊತ್ತಿರುವ ನ್ಯೂಸ್. ಈ ಸಿನಿಮಾದಲ್ಲಿ ಕೋಮಲ್ ಕೆಂಪೇಗೌಡ ಅವತಾರ ಎತ್ತಿದ್ದಾರೆ. ಶಂಕರ್ ಗೌಡ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಲೂಸ್ ಮಾದ ಯೋಗಿ, ಕ್ರಿಕೆಟಿಗ ಎಸ್ ಶ್ರೀಶಾಂತ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇಷ್ಟು ದಿನ ಹಾಸ್ಯ ಪಾತ್ರಗಳ ಮೂಲಕ ಕನ್ನಡಿಗರ ಮನೆ -ಮನದಲ್ಲಿ ಹಾಸುಹೊಕ್ಕಾಗಿರುವ ನಟ ಕೋಮಲ್ ಈಗ ಬೇರೆ ಗೆಟಪ್ ನಲ್ಲಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ತೆರೆ ಮೇಲೆ ಬರುತ್ತಿರುವ ಕೋಮಲ್ ಈ ಪಾತ್ರಕ್ಕಾಗಿ ಎಷ್ಟೆಲ್ಲಾ ಕಸರತ್ತು ಮಾಡಿದ್ದಾರೆ ಗೊತ್ತೇ?
ಒಂದಲ್ಲ ಎರಡಲ್ಲ…ಬರೋಬ್ಬರಿ 23 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಪೊಲೀಸ್ ಆಫೀಸರ್ ಪಾತ್ರ ಎಂದಾಗ ಖಡಕ್ ಆಗಿ ಕಾಣಿಸಿಕೊಳ್ಳಬೇಕು ಎಂದುಕೋಮಲ್ ಶ್ರಮ ಹಾಕಿದ್ದಾರೆ. ತೂಕ ಇಳಿಸಿಕೊಳ್ಳುವುದರ ಜೊತೆಗೆ ಬಾಡಿ ಬಿಲ್ಡ್ ಮಾಡಿ ಫಿಟ್ ಆಗಿ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಟ್ರೇಲರ್ ನೋಡಿ ಫುಲ್ ಖುಷಿಯಾಗಿರುವ ಅಭಿಮಾನಿಗಳು ಸಿನಿಮಾಕ್ಕೆ ಕಾದಿದ್ದಾರೆ. ಸದ್ಯದಲ್ಲೇ ಕೆಂಪೇಗೌಡ ಕೋಮಲ್ ನಿಮ್ಮ ಮುಂದೆ ಬರಲಿದ್ದಾರೆ.
ಈ ಸಿನಿಮಾಕ್ಕೆ ವರುಣ್ ಸಂಗೀತ ನೀಡಿದ್ದಾರೆ.ರಿಷಿಕಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ. ಲೂಸ್ ಮಾದ ಯೋಗಿ, ಎಸ್ ಶ್ರೀಶಾಂತ್ ಅಲ್ಲದೆ ಮಧುಸೂದನ್ ರಾವ್, ಸತ್ಯಪ್ರಕಾಶ್ ಮತ್ತಿತರರು ತಾರಾಗಣದಲ್ಲಿದ್ದಾರೆ.
ಕೆಂಪೇಗೌಡಗಾಗಿ ಕೋಮಲ್ ಏನೆಲ್ಲಾ ಮಾಡಿದ್ದಾರೆ?
Date: