ಬೆಂಗಳೂರು: ರಾಜಕಾರಣ ಮಾಡುವವರು ರಾಜಕಾರಣ ಮಾಡುತ್ತಾರೆ. ನಾವು ಯಾರಿಗೂ ಅಗೌರವ ಕೊಡುವ ಅಗತ್ಯ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಂಪೇಗೌಡರ ಜಯಂತಿ ಅಂಗವಾಗಿ ವಿಧಾನಸೌಧ ಮುಂಭಾಗ ಇರುವ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಬಳಿಕ ಕೆಂಪೇಗೌಡ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ಹೆಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಹೆಸರು ಕೈಬಿಟ್ಟಿರುವ ವಿಚಾರವಾಗಿ ಮಾತನಾಡಿದ ಅವರು,
ರಾಜಕಾರಣ ಮಾಡುವವರು ರಾಜಕಾರಣ ಮಾಡುತ್ತಾರೆ. ನಾವು ಯಾರಿಗೂ ಅಗೌರವ ಕೊಡುವ ಅಗತ್ಯ ಇಲ್ಲ. ಎಸ್.ಎಂ. ಕೃಷ್ಣ ಇದ್ದಾರೆ. ಸದನಾಂದ ಗೌಡರು ಇದ್ದಾರೆ. ದೇವೇಗೌಡರು ಇದ್ದಾರೆ. ಕುಮಾರಸ್ವಾಮಿಯವರೂ ಇದ್ದಾರೆ. ಸಮಾಜದವರನ್ನು ಸೇರಿಸಬೇಕಿತ್ತು. ಅಧಿಕಾರಿಗಳು ಪ್ರೊಟೋಕಾಲ್ ನೋಡಿದ್ದಾರೆ. ಅದರಂತೆ ಅವರ ಹೆಸರನ್ನು ಕೈಬಿಟ್ಟಿದ್ದಾರೆ. ದೇವೇಗೌಡರು ಹಾಸನ ಜಿಲ್ಲೆ ವ್ಯಾಪ್ತಿಗೆ ಬರುತ್ತಾರೆ. ಕುಮಾರಸ್ವಾಮಿ ಮಂಡ್ಯ ಜಿಲ್ಲೆ ಸಂಸದರಾಗಿದ್ದಾರೆ.
ನಿರ್ಮಲಾ ಸೀತಾರಾಮನ್ ಬೆಂಗಳೂರಿನಿಂದ ಆಯ್ಕೆಯಾಗಿದ್ದು, ಅವರ ಹೆಸರು ಹಾಕಲಾಗಿದೆ ಎಂದರು. ಹೆಸರು ಹಾಕಬಾರದು ಅಂತೇನಿಲ್ಲ, ಹಾಕಬೇಕು. ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸೋಣ. ಇದರ ಜೊತೆಗೆ ಬೇರೆ ಸಮುದಾಯದ ಸ್ವಾಮಿಗಳನ್ನೂ ಕರೆಯಬೇಕಿತ್ತು. ಕೆಂಪೇಗೌಡರು ಬರೀ ಒಕ್ಕಲಿಗರ ಆಸ್ತಿಯಲ್ಲ. ಅವರು ಎಲ್ಲಾ ಸಮಾಜದ ಆಸ್ತಿಯಾಗಿದ್ದಾರೆ. ಏನೋ ಲೋಪವಾಗಿದೆ. ಮುಂದೆ ಸರಿಪಡಿಸೋಣ” ಎಂದು ಡಿಕೆಶಿ ತಿಳಿಸಿದರು.
ಕೆಂಪೇಗೌಡರು ಬರೀ ಒಕ್ಕಲಿಗರ ಆಸ್ತಿಯಲ್ಲ. ಅವರು ಎಲ್ಲಾ ಸಮಾಜದ ಆಸ್ತಿ !
Date: