ಕೆಎಸ್ ಈಶ್ವರಪ್ಪ ಅವರಿಗೆ ಸಲಹೆ ನೀಡುವಷ್ಟು ನಾನು ದೊಡ್ಡನಲ್ಲ: ಅಣ್ಣಾಮಲೈ

0
25

ಶಿವಮೊಗ್ಗ: ಜನತೆ ಈ ಬಾರಿ ಮೋದಿಗೆ ಹಾಕುವ ವೋಟು ಧನ್ಯವಾದ ಹೇಳುವ ವೋಟು ಎಂದು ಭಾವಿಸಿದ್ದಾರೆ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದ್ದಾರೆ. ಶಿವಮೊಗ್ಗದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಬಾರಿ ನಾವೆಲ್ಲರೂ ಸ್ಪಷ್ಟವಾಗಿದ್ದೇವೆ. ಇದು ಮೋದಿ ಚುನಾವಣೆ. ಶಿವಮೊಗ್ಗದಲ್ಲಿ ಎಂಎಲ್ಎ ಯಾರು, ಎಂಎಲ್ಸಿ ಯಾರು, ಕಾರ್ಪೋರೇಟರ್ ಯಾರು ಎಂಬ ಚುನಾವಣೆ ಇದು ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಎಲ್ಲ ಮತಗಳು ಮೋದಿ ಅವರಿಗೆ ಹೋಗಬೇಕು. ಯಾಕೆಂದರೆ ಮೋದಿ 10 ವರ್ಷ ಕಷ್ಟಪಟ್ಟಿದ್ದಾರೆ, ದೇಶಕ್ಕಾಗಿ ದುಡಿದಿದ್ದಾರೆ. ಹೀಗಾಗಿ ಜನತೆ ಈ ಬಾರಿ ಮೋದಿಗೆ ಹಾಕುವ ವೋಟು ಧನ್ಯವಾದ ಹೇಳುವ ವೋಟು ಎಂದು ಭಾವಿಸಿದ್ದಾರೆ‘‘ ಎಂದರು.
ಇನ್ನೂ ಇಲ್ಲಿ ಸಮಸ್ಯೆ ಎಂದರೆ, ಜನರು ನನಗೆ ಮೋದಿಜಿ ಇಷ್ಟ, ಆದರೆ ಲೋಕಲ್ ಬಿಜೆಪಿ ಇಷ್ಟ ಇಲ್ಲ. ಹಾಗಾಗಿ ನಾನು ಪಕ್ಷೇತರ ನಿಲ್ಲುತ್ತೇನೆ ಎನ್ನುತ್ತಾರೆ. ಆದರೆ ಇದು ರಾಷ್ಟ್ರಮಟ್ಟದ ಚುನಾವಣೆ. ನೀವಿಲ್ಲಿ ಬಿಜೆಪಿ ಎಂಪಿಗಳಿಗೆ ಮತ ಹಾಕಿದರೆ ನರೇಂದ್ರ ಮೋದಿ ಮತ್ತೆ ಗೆಲ್ಲುತ್ತಾರೆ. ಹಾಗಾಗಿ ನಾನು ವಿನಂತಿಸಿಕೊಳ್ಳುವುದು ಏನೆಂದರೆ, ‘ಕೆಎಸ್ ಈಶ್ವರಪ್ಪ ಅವರಿಗೆ ಸಲಹೆ ನೀಡುವಷ್ಟು ನಾನು ದೊಡ್ಡನಲ್ಲ. ನಾನು ಪಕ್ಷದಲ್ಲಿ ತುಂಬಾ ಸಣ್ಣ ವ್ಯಕ್ತಿ’. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೇ ರೀತಿಯಾಗಿತ್ತು. ಪುತ್ತೂರಿನಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಕ್ಷೇತರವಾಗಿ ನಿಂತಿದ್ದರು. ಆದರೆ ಈಗ ಮತ್ತೆ ಪಕ್ಷ ಸೇರಿದ್ದಾರೆ ಎಂದರು ನೆನಪು ಮಾಡಿಕೊಂಡರು.