ರಾಕಿಂಗ್ ಸ್ಟಾರ್ ಯಶ್ ಮತ್ತು ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್ನ ಮೆಗಾ ಮೂವಿ ಕೆಜಿಎಫ್. ಈ ಸಿನಿಮಾ ಸ್ಯಾಂಡಲ್ವುಡ್ ಹೆಸರನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಸಿನಿಮಾ. ಈ ಸಿನಿಮಾದಿಂದ ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರಾದ್ರು. ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಸಖತ್ ಸೆನ್ಷೇಷನ್ ಕ್ರಿಯೇಟ್ ಮಾಡಿದ ಸಿನಿಮಾ..! ಈಗ ಆ ಸಿನಿಮಾದ ಚಾಪ್ಟರ್ 2 .. ಕೆಜಿಎಫ್ -2 ಸೆಟ್ಟೇರಿದೆ. ಈ ಸಿನಿಮಾ ಬಗ್ಗೆಯೂ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.
ಆದರೆ. ಈ ಸಿನಿಮಾಕ್ಕೆ ಯಾರೂ ಊಹಿಸಿರದ ಕಂಟಕ ಎದುರಾಗಿದೆ. ಕೋಲಾರದ ಕೆನೆಡೀಸ್ ಸೈನೆಡ್ ಗುಡ್ಡದ ಮೇಲೆ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದು, ಅದಕ್ಕೀಗ ಬ್ರೇಕ್ ಬಿದ್ದಿದೆ. ಅಲ್ಲಿ ಪರಿಸರಕ್ಕೆ ಹಾನಿ ಆಗುತ್ತೆ. ಜನರಿಗೆ ತೊಂದರೆ ಆಗುತ್ತದೆ ಎಂದು ಶ್ರೀನಿವಾಸ್ ಎನ್ನುವವರು ಕೋರ್ಟ್ ಮೊರೆ ಹೋಗಿದ್ದಾರೆ. ಜೆಎಎಂಎಫ್ಸಿ ನ್ಯಾಯಾಲಯ ಸದ್ಯ ಚಿತ್ರೀಕರಣಕ್ಕೆ ತಡೆ ನೀಡಿದೆ. ಅದ್ದೂರಿ ಸೆಟ್ ಹಾಕಲಾಗಿತ್ತು.. ಆದರೆ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿದೆ.
ಕೆಜಿಎಫ್ ಸಿನಿಮಾದಿಂದ ಕನ್ನಡ ಚಿತ್ರರಂಗದ ಬಗ್ಗೆ ಎಲ್ಲಾ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಉಗ್ರಂ ಖ್ಯಾತಿಯ ಡೈರೆಕ್ಟರ್ ನೀಲ್ ಹೆಸರು ಇಡೀ ವಿಶ್ವಮಟ್ಟದಲ್ಲಿ ಬೆಳಗಿತ್ತು. ರಾಕಿಂಗ್ ಸ್ಟಾರ್ ಯಶ್ ಗೆ ಬೇರೆ ಬೇರೆ ಕಡೆಗಳಲ್ಲಿ ಫ್ಯಾನ್ಸ್ ಹುಟ್ಟಿಕೊಂಡಿದ್ರು. ಯಶ್ ಕೆಜಿಎಫ್ 2ಗಾಗಿ ಬೇರೆ ಬೇರೆ ಸ್ಕ್ರಿಪ್ಟ್ ಗಳನ್ನು ಸದ್ಯಕ್ಕೆ ದೂರವಿಟ್ಟಿದ್ದಾರೆ.