ಸ್ಯಾಂಡಲ್ ವುಡ್ ನ ಇತಿಹಾಸದಲ್ಲಿ ಡಿಫ್ರೆಂಟ್ ಸಿನಿಮಾ ಕೆಜಿಎಫ್. ಡೈರೆಕ್ಟರ್ ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್ ನ ಸಿನಿಮಾ ಐದು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಸ್ಯಾಂಡಲ್ ವುಡ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಸಿನಿಮಾ ಈ ಕೆಜಿಎಫ್. ಈ ಸಿನಿಮಾದಿಂದ ಡೈರೆಕ್ಟರ್ ನೀಲ್ ತನ್ನ 2ನೇ ಸಿನಿಮಾ (ಮೊದಲ ಸಿನಿಮಾ ಉಗ್ರಂ) ದಲ್ಲೇ ರಾಷ್ಟ್ರಮಟ್ಟದ ಡೈರೆಕ್ಟರ್ ಆದರು. ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಆ್ಯಕ್ಟರ್ ಆಗಿದ್ದಾರೆ,
ಈಗ ಕೆಜಿಎಫ್ ಚಾಪ್ಟರ್ 2 ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ. ಇತ್ತೀಚೆಗೆ ನಡೆದ ಆಡಿಷನ್ಗೆ ಬರೋಬ್ಬರಿ 5000 ಮಂದಿ ಭಾಗವಹಿಸಿ ಡೈಲಾಗ್ ಹೊಡೆದು ಗಮನ ಸೆಳೆದಿದ್ದರು, ಅವರಲ್ಲಿ ಎಷ್ಟು ಜನ ಆಯ್ಕೆಯಾಗಿದ್ದಾರೆ.. ಯಾರೆಲ್ಲಾ ಆಯ್ಕೆಯಾಗಿದ್ದಾರೆ ಎನ್ನುವ ಕುತೂಹಲವೂ ಎಲ್ಲರಲ್ಲೂ ಇದೆ.
ಕೆಜಿಎಫ್ ಚಾಪ್ಟರ್ 2ಗೆ ಮೂಡಯಬಿದ್ರೆಯಲ್ಲಿ ಸೆಟ್ ನಿರ್ಮಿಸಲಾಗುತ್ತಿದೆ ಎನ್ನುವ ಸುದ್ದಿಯೂ ಇದೆ. ಇದರ ಜೊತೆಗೆ ಮಂಗಳೂರಲ್ಲೂ ಆಡಿಷನ್ ನಡೆಯಲಿದೆ ಎನ್ನಲಾಗಿದೆ. ಈ ನಡುವೆ ಮೇ.8ರಿಂದ ಶೂಟಿಂಗ್ ಶುರುವಾಗುತ್ತೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಅಧೀರ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವರು ತಂಡ ಕೂಡಿಕೊಳ್ಳುತ್ತಾರೆಯೇ ಎನ್ನುವುದನ್ನು ಕಾದುನೋಡಬೇಕು.
ಕೆಜಿಎಫ್ 2 ಶೂಟಿಂಗ್ ಡೇಟ್ ಫಿಕ್ಸ್, ಸಂಜಯ್ ದತ್ ಸೇರಿ ಕೊಳ್ಳುತ್ತಾರಾ ರಾಕಿಭಾಯ್ ಟೀಮ್?
Date: