ಕೆಜಿಎಫ್ ಗೆ 8 & ಟಗರು ಗೆ 3 ಸೈಮಾ ಅವಾರ್ಡ್..! ರಘುರಾಮ್ ಗರಂ..

Date:

ರಘುರಾಮ್ ಕನ್ನಡ ಚಲನ ಚಿತ್ರರಂಗದ ನಟ ನಿರ್ದೇಶಕ.. ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ರಘು ರಾಮ್ ಅವರು ಯಾವುದೇ ರೀತಿಯ ವಿವಾದಗಳನ್ನು ಇದುವರೆಗೂ ಸಹ ಮಾಡಿಕೊಳ್ಳದಂತಹ ಕಲಾವಿದ. ಆದರೆ ಇದೀಗ ಪ್ರಸಕ್ತ ಸೈಮಾ ಅವಾರ್ಡ್ ಕುರಿತಾಗಿ ಟ್ವೀಟ್ ಒಂದನ್ನು ಮಾಡಿದ್ದು ವಿವಾದವನ್ನು ಸೃಷ್ಟಿಸಿದ್ದಾರೆ.

ಕಳೆದ ವರ್ಷ ತೆರೆಕಂಡ ಚಿತ್ರಗಳಿಗೆ ಈ ವರ್ಷ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ( SIIMA ) ಅನ್ನು ಕೊಡಲಾಯಿತು. ಹೀಗೆ ನೀಡಿದ ಸೈಮಾ ಅವಾರ್ಡ್ ನಲ್ಲಿ ಕನ್ನಡದ ಕೆಜಿಎಫ್ ಚಿತ್ರಕ್ಕೆ ಒಟ್ಟು ಎಂಟು ಪ್ರಶಸ್ತಿಗಳನ್ನು ನೀಡಲಾಯಿತು. ಹೌದು ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ ಒಟ್ಟು ಎಂಟು ಪ್ರಶಸ್ತಿಗಳನ್ನು ಸೈಮಾ ನೀಡಿದೆ.

ಇನ್ನು ಸೈಮಾ ಪ್ರಶಸ್ತಿಗೆ ಕೆಜಿಎಫ್ ಚಿತ್ರ ಒಟ್ಟು 12 ಕೆಟಗರಿಯಲ್ಲಿ ನಾಮಿನೇಟ್ ಆಗಿತ್ತು ಮತ್ತು ಶಿವಣ್ಣ ಅಭಿನಯದ ಟಗರು ಚಿತ್ರ ಸಹ ಬರೋಬ್ಬರಿ 11 ಕೆಟಗರಿಯಲ್ಲಿ ನಾಮಿನೇಟ್ ಆಗಿತ್ತು. ಕೆಜಿಎಫ್ ಚಿತ್ರದ ರೀತಿಯೇ ದೊಡ್ಡ ಮಟ್ಟದಲ್ಲಿ ಶಿವಣ್ಣ ಅಭಿನಯದ ಟಗರು ಚಿತ್ರ ನಾಮಿನೇಟ್ ಆಗಿದ್ದರೂ ಸಹ ಆ ಚಿತ್ರಕ್ಕೆ ಕೇವಲ ಮೂರು ಪ್ರಶಸ್ತಿಗಳನ್ನು ಮಾತ್ರ ನೀಡಲಾಗಿದೆ. ಹೌದು ಅತ್ಯುತ್ತಮ ಖಳನಾಯಕ, ಅತ್ಯುತ್ತಮ ಹಿನ್ನೆಲೆ ಗಾಯಕಿ ಮತ್ತು ಅತ್ಯುತ್ತಮ ನಟಿ (ಕ್ರಿಟಿಕ್ಸ್) ವಿಭಾಗಗಳಲ್ಲಿ ಒಟ್ಟು 3 ಪ್ರಶಸ್ತಿಗಳು ಟಗರು ಪಾಲಾಗಿವೆ.

ದೊಡ್ಡ ಮಟ್ಟದಲ್ಲಿ ಸದ್ದು & ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದ, ಟಗರು ಚಿತ್ರವನ್ನು ಪ್ರೇಕ್ಷಕರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಟಗರು ಚಿತ್ರಕ್ಕೆ ಸೈಮಾದಲ್ಲಿ ಸರಿಯಾದ ರೀತಿಯಲ್ಲಿ ಅವಾರ್ಡ್ ನೀಡದೇ ಸೈಮಾ ಅವಮಾನ ಮಾಡಿದೆ ಎಂದು ರಘುರಾಮ್ ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಶಿವಣ್ಣ ಅಭಿಮಾನಿಗಳೂ ಸಹ ರಘುರಾಮ್ ಅವರ ಟ್ವೀಟ್ ಅನ್ನು ಸಮರ್ಥಿಸಿಕೊಳ್ಳುತ್ತಿದ್ದು ಸೈಮಾ ವಿರುದ್ಧ ಟ್ವಿಟರ್ ನಲ್ಲಿ ಕಿಡಿಕಾರಿದ್ದಾರೆ

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...