ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರುತ್ತಲೇ ಇದೆ. ಕಳೆದ ಐದಾರು ವರ್ಷಗಳಿಂದ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ ಎಂಬ ಸುದ್ದಿ ಕೇಳಿದ್ದೇ ಇಲ್ಲ. ಬೇರೆ ದೇಶಗಳಲ್ಲಿ ಪೆಟ್ರೋಲ್ ಸಂಖ್ಯೆ ಕಡಿಮೆ ಇದೆ ಆದರೆ ಭಾರತದಲ್ಲಿ ಮಾತ್ರ ಪೆಟ್ರೋಲ್ ಸಂಖ್ಯೆ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಕೊರೋನಾವೈರಸ್ ಹಾವಳಿಯ ನಂತರವೂ ಸಹ ಪೆಟ್ರೋಲ್ ಬೆಲೆ ತನ್ನ ನಾಗಾಲೋಟವನ್ನು ಮುಂದುವರೆಸಿದ್ದು ಶತಕವನ್ನು ದಾಟಿದೆ.
ಹೌದು ರಾಜಸ್ಥಾನದಲ್ಲಿ ಪೆಟ್ರೋಲ್ ಬೆಲೆ ಸೆಂಚುರಿ ಬಾರಿಸಿದ್ದು ಲೀಟರ್ ಒಂದಕ್ಕೆ ಬರೋಬ್ಬರಿ 101 ರೂಪಾಯಿಗಳು ಆಗಿದೆ. ಹೀಗೆ ಪೆಟ್ರೋಲ್ ಬೆಲೆ ಏರುತ್ತಿದ್ದರೆ ಮುಂದೊಂದು ದಿನ ಶತಕ ದಾಟುವುದು ಪಕ್ಕಾ ಎಂದು ಹೇಳಲಾಗುತ್ತಿದ್ದ ಜನರ ಮಾತು ಇದೀಗ ನಿಜವಾಗಿದೆ. ಕೆಲವರು ನುಡಿದ ಭವಿಷ್ಯದಂತೆ ಇದೀಗ ಪೆಟ್ರೋಲ್ ಬೆಲೆ ದೇಶದಲ್ಲಿ ನೂರರ ಗಡಿ ದಾಟಿದ್ದು ಜನರು ಚಿಂತೆಗೆ ಈಡಾಗಿದ್ದಾರೆ.
ಸದ್ಯ ರಾಜಸ್ಥಾನದಲ್ಲಿ ಶತಕದ ಗಡಿ ದಾಟಿರುವ ಪೆಟ್ರೋಲ್ ಬೆಲೆ ಮುಂದೆ ಯಾವ ರಾಜ್ಯಗಳಲ್ಲಿ ಎಷ್ಟರ ಮಟ್ಟಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕು.