ಬಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭ ಹೃದಯಾಘಾತಕ್ಕೆ ಒಳಗಾಗಿ ಕೆಎಸ್‌ಆರ್ ಟಿಸಿ ಬಸ್ ನಿರ್ವಾಹಕ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಇವರು ಕೆಲಸ ನಿರ್ವಹಿಸುತ್ತಿದ್ದ ಬಸ್ ಚಿಕ್ಕಮಗಳೂರು ನಗರ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಉಡುಪಿಗೆ ಹೊರಟಿತ್ತು. ಕೊಟ್ಟಿಗೆಹಾರ ಬಳಿ ಸಾಗುವಾಗ ನಿರ್ವಾಹಕ ವಿಜಯ ಕುಮಾರ್ ಅಸ್ವಸ್ಥರಾಗಿದ್ದಾರೆ. ತಕ್ಷಣವೇ ಚಾಲಕ ಮತ್ತು ಕೊಟ್ಟಿಗೆಹಾರ ನಿಲ್ದಾಣ ನಿರೀಕ್ಷಕ ಬಣಕಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಮೂಡಿಗೆರೆ ಆಸ್ಪತ್ರೆಗೆ ಒಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಅಲ್ಲಿ ಅವರು ಮೃತಪಟ್ಟಿದ್ದಾರೆ