ಕೆಲಸ ಬಿಡುವುದು, ನಿಮ್ಮನ್ನು ಕೆಲಸದಿಂದ ತೆಗೆಯೋದು ಎರಡೂ ಕಾಮನ್. ಸಂಸ್ಥೆ ನಿಮಗೆ, ಸಂಸ್ಥಗೆ ನೀವು ಕೂಡ ಶಾಶ್ವತವಲ್ಲ! ಆದ್ರೆ , ಸಂಸ್ಥೆಯಿಂದ ಆಚೆ ಬರುವಾಗ ನೀವು ಇವುಗಳನ್ನು ಅನುಸರಿಸಲೇ ಬೇಕು.
*ಸಿಟ್ಟಾಗಿ ಬರಬೇಡಿ.ನಗುತ್ತಲೇ ಬನ್ನಿ. ಯಾವ್ದೇ ಸಂದರ್ಭದಲ್ಲೂ ನೀವು ತಾಳ್ಮೆ ಕೆಡಬೇಡಿ . ನಿಮ್ಮ ಭವಿಷ್ಯ ಮುಖ್ಯ.
*ನಿಮಗೆ ಬೇಕಾದ ಎಲ್ಲಾ ರೆಕಾರ್ಡ್ ಗಳನ್ನು ಬ್ಯಾಕಪ್ ತಗೋಳೋದನ್ನು ಮರೆಯಬೇಡಿ. ಬೇಡ ರೆಕಾರ್ಡ್ ಗಳನ್ನು, ನಿಮ್ಗೆ ಸಮಸ್ಯೆ ಒಡ್ಡಬಹುದಾದ ದಾಖಲೆಗಳನ್ನು ಯಾವ್ದೇ ಕಾರಣಕ್ಕೂ ಕಂಪ್ಯೂಟರ್ ನಲ್ಲಿ ಉಳಿಸಬೇಡಿ.
* ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳದೇ ಇರೋದು ಒಳ್ಳೆಯದು. ನೀವು ಹೇಳುವುದು ಒಂದು ಜನ ಅರ್ಥ ಮಾಡಿಕೊಳ್ಳೋದು ಒಂದಾದ್ರೆ ಕಷ್ಟ.