ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ದಂಪತಿಗಳಿಗೆ ಇತ್ತೀಚೆಗಷ್ಟೇ ಹೆಣ್ಣು ಮಗು ಜನನವಾಯಿತು. ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ದಂಪತಿಗಳು ಖುಷಿಪಟ್ಟಿದ್ದರು. ಇನ್ನೂ ಆ ಮಗುವಿಗೆ ನಿನ್ನೆಯಷ್ಟೆ ನಾಮಕರಣ ಕಾರ್ಯಕ್ರಮವನ್ನು ಮಾಡಿದ್ದಾರೆ.
ವಿರಾಟ್ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಮಗುವಿಗೆ ಯಾವ ಹೆಸರನ್ನು ಇಡಬಹುದು ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಈ ಕುತೂಹಲಕ್ಕೆ ತೆರೆ ಬಿದ್ದಿದ್ದು ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ ತಮ್ಮ ಮಗಳಿಗೆ ವಮಿಕಾ ಎಂದು ಹೆಸರನ್ನು ಇಟ್ಟಿದ್ದಾರೆ.
ವಮಿಕಾ ಎಂಬ ಹೆಸರನ್ನು ಕೇಳಿದ ಕೂಡಲೆ ತುಂಬಾ ಜನರಿಗೆ ಇದು ಏನೆಂಬುದು ಅರ್ಥವಾಗಿರಲಿಲ್ಲ. ಈ ಹೆಸರಿನ ಅರ್ಥವೇನು ಎಂದು ಹುಡುಕಾಡಲು ಆರಂಭಿಸಿದ್ದರು. ಕೊನೆಗೆ ಈ ಹೆಸರಿನ ಅರ್ಥವೇನು ಎಂದು ಗೂಗಲ್ ನಲ್ಲಿ ಹುಡುಕಿದಾಗ ನಂತರ ತಿಳಿದುಬಂದದ್ದು , ವಮಿಕಾ ಎಂದರೆ ದುರ್ಗಾ ದೇವಿ ಎಂದರ್ಥ.. ಹೌದು ವಮಿಕಾ ಎಂದರೆ ಹಿಂದೂ ದೇವತೆಗಳಲ್ಲಿ ಒಬ್ಬರಾದ ದುರ್ಗಾದೇವಿ ಅವರ ಇನ್ನೊಂದು ಹೆಸರು.. ಹೀಗೆ ದುರ್ಗಾದೇವಿ ಅವರ ಹೆಸರನ್ನ ತಮ್ಮ ಮಗಳಿಗೆ ಇಡುವ ಮೂಲಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜನರ ಮನಸ್ಸನ್ನು ಗೆದ್ದಿದ್ದಾರೆ..