ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾದ ಆರೋಪ ಪ್ರಕರಣ ಸಂಬಂಧ ನಾಳೆ(ಜ.16) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯ (ಈ.ಡಿ) ಸಮನ್ಸ್ ಜಾರಿಗೊಳಿಸಿದೆ.ಕೆ.ಜೆ.ಜಾರ್ಜ್ ಹಾಗು, ಇವರ ಪತ್ನಿ ಸುಜಾ ಜಾರ್ಜ್, ಪುತ್ರ ರಾಣಾ ಜಾರ್ಜ್ ಹಾಗೂ ಪುತ್ರಿ ರೆನಿತಾ ಅವರಿಗೂ ಸಮನ್ಸ್ ಜಾರಿಗೊಳಿಸಲಾಗಿದೆ.
ನಾಲ್ವರೂ ಹೊಂದಿರುವ ಬ್ಯಾಂಕ್ ಖಾತೆಯ ವಿವರ, ದೇಶ ಹಾಗೂ ವಿದೇಶದಲ್ಲಿ ಹೊಂದಿರುವ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿ ವಿವರಗಳು, 2005-06 ರಿಂದ ಇದುವರೆಗೆ ಆದಾಯ ತೆರಿಗೆ ಪಾವತಿಸಿರುವ ದಾಖಲೆ, ಉದ್ಯಮ, ಕಂಪನಿಗಳಲ್ಲಿ ಹೊಂದಿರುವ ಷೇರುಗಳ ವಿವರಗಳು ಸೇರಿ ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನೂ ಒದಗಿಸುವಂತೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.