ರಾಜ್ಯ ಬಿಜೆಪಿಯಿಂದ ನೂತನವಾಗಿ ಆಯ್ಕೆಯಾದ ಸಂಸದರು ಹಾಗೂ ಕೇಂದ್ರ ಸಚಿವರಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 5 ಎಸ್ ಸಿ ಹಾಗೂ 2 ಎಸ್ ಟಿ ಕ್ಷೇತ್ರಗಳಲ್ಲಿಈ ಬಾರಿ ಬಿಜೆಪಿ ಗೆದ್ದಿದೆ, ಆದರೂ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ನಮ್ಮನ್ನು ಪ್ರಶ್ನಿಸುವ ಮುನ್ನ ದಲಿತ ಸಮುದಾಯದ ಡಾ. ಜಿ. ಪರಮೇಶ್ವರ್ ಅವರನ್ನು ಸಿಎಂ ಮಾಡಲಿ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದರೂ ಅತ್ತ ಗಮನ ಹರಿಸದ ಸಿಎಂ ಕುಮಾರಸ್ವಾಮಿ ಇದೀಗ ಬಡವರ ಪರ ಎಂದು ದೊಂಬರಾಟ ಆಡುತ್ತಿದ್ದಾರೆ. ಜೆಡಿಎಸ್ ನ ಸುಳ್ಳು ಮೋಸದ ಫಲವಾಗಿ ತಾತ-ಮೊಮ್ಮಗನನ್ನು ಜನರು ಮನೆಗೆ ಕಳಿಸಿದ್ದಾರೆ ಎಂದು ಕಿಡಿಕಾರಿದರು.