ಕೇರಳ ನಂತರ ಮತ್ತೊಂದು ರಾಜ್ಯದಲ್ಲಿ ಕೊವಿಡ್ ಸೋಂಕಿತರ ಹೆಚ್ಚಳ!

0
37

ಕೇರಳದ ಬಳಿಕ ಈಗ ಮಿಜೋರಾಂನಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿದೆ. ಮಿಜೋರಾಂನಲ್ಲಿ ಪಾಸಿಟಿವಿಟಿ ದರವು ದೇಶದಲ್ಲೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆಗೆ ಕೇಂದ್ರ ಸರ್ಕಾರವು ತನ್ನ ತಂಡವನ್ನು ಮಿಜೋರಾಂ ರಾಜ್ಯಕ್ಕೆ ಕಳುಹಿಸಿದೆ, ಜೊತೆಗೆ ಆರ್ಥಿಕ ಸಹಾಯವನ್ನು ಕೂಡಾ ಮಾಡಿದೆ.

”ಮಿಜೋರಾಂನಲ್ಲಿ ಸದ್ಯ ಪಾಸಿಟಿವಿಟಿ ದರವು ಶೇಕಡ 18.44 ಕ್ಕೆ ಏರಿಕೆ ಆಗಿದೆ, ದೇಶದಲ್ಲೇ ಅಧಿಕ ಪಾಸಿಟಿವಿಟಿ ದರವನ್ನು ಹೊಂದಿರುವ ರಾಜ್ಯ ಮಿಜೋರಾಂ ಆಗಿದೆ,” ಎಂದು ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದ ವಾರದ ಪಾಸಿಟಿವಿಟಿ ದರವು ಶೇಕಡ 1.74 ಆಗಿದೆ. ಇದು ಕಳೆದ 97 ದಿನದಿಂದ ಮೂರು ಶೇಕಡ ಇಳಿಕೆ ಕಂಡಿದೆ. ದೇಶದ ದೈನಂದಿನ ಪಾಸಿಟಿವಿಟಿ ದರವು ಶೇಕಡ 1.56 ಸಮೀಪದಲ್ಲಿ ಇದೆ. ಇದು ಕಳೆದ 31 ದಿನದಲ್ಲಿ ಶೇಕಡ ಮೂರರಷ್ಟು ಇಳಿಕೆ ಕಂಡಿದೆ.

ಬುಧವಾರ ನವದೆಹಲಿಯಲ್ಲಿ ಮಿಜೋರಾಂ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷನ್‌, “ಮೀಜೋರಾಂಗೆ ಕೇಂದ್ರದಿಂದ ಒಂದು ತಂಡವನ್ನು ಅತೀ ಶೀಘ್ರದಲ್ಲೇ ಕಳುಹಿಸಲಾಗುವುದು,” ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here