ಕೇಸ್ ಬುಕ್ ಆಗುತ್ತಿದ್ದ ಹಾಗೆ ಕಂಪ್ಲಿ ಶಾಸಕ ಗಣೇಶ್ ನಾಟ್ ರೀಚಬಲ್…

Date:

ಕೇಸ್ ಬುಕ್ ಆಗುತ್ತಿದ್ದ ಹಾಗೆ ಕಂಪ್ಲಿ ಶಾಸಕ ಗಣೇಶ್ ನಾಟ್ ರೀಚಬಲ್…

ಈಗಲ್ಟನ್ ರೆಸಾರ್ಟ್ ನಲ್ಲಿ ನಡೆದ ಕಂಪ್ಲಿ ಶಾಸಕ‌ ಗಣೇಶ್ ಹಾಗು ಆನಂದ್ ಸಿಂಗ್ ನಡುವಿನ ಜಗಳದಲ್ಲಿ ಆನಂದ್ ಸಿಂಗ್ ಅವರಿಗೆ ತೀರ್ವ ಪೆಟ್ಟಾಗಿದೆ.. ಕಣ್ಣು ಮತ್ತು ಹೊಟ್ಟೆಯ ಭಾಗದಲ್ಲಿ ಇನ್ನು ನೋವಿದ್ದು ಅವರನ್ನ ಇಂದು ಸಹ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡೋದು ಡೌಟ್ ಎನ್ನಲಾಗ್ತಿದೆ.. ಇತ್ತ ಘಟನೆ ನಡೆಯುತ್ತಿದ್ದ ಹಾಗೆ ಈಗಲ್ಟನ್ ರೆಸಾರ್ಟ್ ನಲ್ಲಿ ತನಿಖೆ ನಡೆಸಿ, ಅನಂದ್ ಸಿಂಗ್ ಅವರಿಂದ ಹೇಳಿಕೆ ಪಡೆದಿರುವ ಬಿಡದಿ ಪೊಲೀಸರು ಶಾಸಕ ಗಣೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ…

ಇನ್ನು ಗಣೇಶ್ ಅವರ ವಿರುದ್ದ ಎಫ್ ಐಆರ್ ದಾಖಲಾಗುತ್ತಿದ್ದ ಹಾಗೆ ಈ ಶಾಸಕ ಅಜ್ಞಾತ ಸ್ಥಳ ಸೇರಿಸಿಕೊಂಡಿದ್ದಾರೆ.. ಫೋನ್ ನಾಟ್ ರೀಚಬಲ್ ಆಗಿದೆ‌‌.. ಸ್ವಕ್ಷೇತ್ರದಲ್ಲು ಶಾಸಕರಿಲ್ಲ ಎಂಬ ಮಾಹಿತಿ ಇದ್ದು, ಅವರ ಬೆಂಬಲಿಗರಿಗು ಶಾಸಕರ ಬಗ್ಗೆ ತಿಳಿದಿಲ್ಲ ಎನ್ನಲಾಗ್ತಿದೆ.. ಹೀಗಾಗೆ ಬಿಡದಿ ಹಾಗು ರಾಮನಗರ ಪೊಲೀಸರು ಗಣೇಶ್ ಅವರ ಪತ್ತೆಗೆ ಮೂರು ತಂಡ ರಚನೆ‌ ಮಾಡಿ ಹುಡುಕಾಟ ನಡೆಸಿದ್ದಾರೆ…

ಬಂಧನ ಭೀತಿ ಎದುರಿಸುತ್ತಿರುವ ಶಾಸಕ ಗಣೇಶ್ ನಿರೀಕ್ಷಣಾ ಜಾಮೀನು ಸಿಗುವವರೆಗೂ ಪೊಲೀಸರ ಕೈಗೆ ಸಿಗದಂತೆ ಅಜ್ಞಾತ ಸ್ಥಳದಲ್ಲಿಯೇ ಇರುವ ಕುರಿತು ಯೋಚಿಸಿದ್ದಾರೆ ಎನ್ನಲಾಗ್ತಿದ್ದು, ಗಲಾಟೆಯಾದ ಸಂದರ್ಭದಲ್ಲಿ ತನ್ನ ಹತ್ಯೆಗೆ ಗನ್ ನೀಡುವಂತೆ ಗನ್ ಮನ್ ಬಳಿ‌ ಕೇಳಿದ್ರು ಅಂತ ಆನಂದ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...