ಕೈಗಾ ಅಣು ಸ್ಥಾವರದಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಉತ್ತರಿಸುವಂತೆ ದಕ್ಷಿಣ ವಲಯ ಹಸಿರು ನ್ಯಾಯಾದಿಕರಣ ನೋಟಿಸ್ ನೀಡಿದೆ.ವಿಚಾರಣೆ ನಡೆಸಿದ ದಕ್ಷಿಣ ವಲಯ ಹಸಿರು ನ್ಯಾಯಾಧಿಕರಣ , ಕೇಂದ್ರ ಅರಣ್ಯ , ಪರಿಸರ ಮತ್ತು ಹವಮಾನ ಇಲಾಖೆಗೂ ಸಹ ನೋಟಿಸ್ ನೀಡಿದೆ. ಸುಮಾರು 14 ಸಾವಿರ ವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಿದನ್ನು ಸ್ಥಳೀಯ ಗ್ರಾಮಸ್ಥರು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು .ಸೂಕ್ಷ್ಮ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಲೆಕ್ಕಿಸದೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದು ಸರಿಯಾದ ನಿರ್ಣಯವಲ್ಲ, ಎಂದು ಜನರು ಅರ್ಜಿಯಲ್ಲಿ ಆರೋಪಿಸಿದ್ದರು .ಇದಕ್ಕೆ ಸಂಬಧಿಸಿದಂತೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ ಕಾಮತ್ , ಜಾವೇದೂರ್ ರೆಹಮಾನ್ , ಬಿ.ಎಸ್. ಪೈ ಅವರುಗಳು ಕೇಂದ್ರ ಸರ್ಕಾರದ ಅನುಮತಿಯನ್ನು ರದ್ದು ಮಾಡುವಂತೆ ಮನವಿ ಮಾಡಿದ್ರು. ಎಲ್ಲರ ವಾದವನ್ನು ಆಲಿಸಿದ ದಕ್ಷಿಣ ಪೀಠ ನೋಟಿಸ್ ನೀಡಿ ಜನವರಿ 28ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕೈಗಾದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆ ಅನುಮತಿ ಕೊಟ್ಟಿದ್ದಕ್ಕೆ ಕೇಂದ್ರಕ್ಕೆ ನೋಟಿಸ್ !
Date: