ಕೊಡಚಾದ್ರಿಗೆ ಭೇಟಿ ನೀಡುವ ಪ್ರವಾಸಿಗರ ಜೇಬಿಗೆ ಕತ್ತರಿಬೀಳಲಿದೆ. ವಾಹನ, ಪಾರ್ಕಿಂಗ್ ಸೇರಿದಂತೆ ವಿವಿಧ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ. ಕ್ಯಾಮರಾಗಳ ಶುಲ್ಕಗಳನ್ನು ಸಹ ಏರಿಸಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆಯ ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಗೆ ಕೊಡಚಾದ್ರಿ ಸೇರುತ್ತದೆ. ಇದು ಸುಮಾರು 370.37 ಚದರ ಕಿ.ಮೀ.ವರೆಗೆ ವ್ಯಾಪಿಸಿದೆ.
ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ, ಅರೆ ನಿತ್ಯಹರಿದ್ವರ್ಣ ಮತ್ತು ತೇವಾಂಶವುಳ್ಳ ಪತನಶೀಲ ಕಾಡುಗಳನ್ನು ಒಳಗೊಂಡಿರುವ ಪರ್ವತ ಶ್ರೇಣಿ ಇದಾಗಿದೆ. ಕೊಡಚಾದ್ರಿಗೆ ಚಾರಣಕ್ಕಾಗಿಯೇ ಸಾವಿರಾರು ಜನರು ಆಗಮಿಸುತ್ತಾರೆ.
1/4/2021ರಿಂದಲೇ ಜಾರಿಗೆ ಬರುವಂತೆ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ. ಈ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಲು ಫಲಕಗಳನ್ನು ಸಹ ಅಳವಡಿಕೆ ಮಾಡಲಾಗಿದೆ.
ಶುಲ್ಕಗಳ ವಿವರ
* ವಾಹನಗಳ ಮೂಲಕ ಕೊಡಚಾದ್ರಿಗೆ ಕತ್ತಿನಹೊಳೆ ಮೂಲಕ ಸಾಗಲು ಭಾರತೀಯರು 50 ರೂ., ವಿದೇಶಿಗರು 400 ರೂ., ಮಕ್ಕಳಿಗೆ 25 ರೂ. ದರ ನಿಗದಿ ಮಾಡಲಾಗಿದೆ.
* ವಾಲೂರು, ಹಿಂಡ್ಲುಮನೆ ಫಾಲ್ಸ್ ಮೂಲಕ ಕೊಡಚಾದ್ರಿಗೆ ಬರಲು ಭಾರತೀಯರು 100 ರೂ., ವಿದೇಶಿಗರು 400 ರೂ., ಮಕ್ಕಳು 50 ರೂ. ಶುಲ್ಕ ಪಾವತಿ ಮಾಡಬೇಕು.
* ಗೈಡ್ ಶುಲ್ಕ ಪ್ರತಿ ಟ್ರಿಪ್‌ಗೆ 1000 ರೂ.
* ವಾಹನ ಪ್ರವೇಶಕ್ಕೆ ಪ್ರತಿ ಟ್ರಿಪ್‌ಗೆ 100 ರೂ., ಪಾರ್ಕಿಂಗ್ ಜಿಪ್‌ಗೆ ಪ್ರತಿದಿನಕ್ಕೆ 30 ರೂ.
* ಕ್ಯಾಮರಾ ಲೆನ್ಸ್ 70 ಎಂಎಂ ತನಕ 300 ಪ್ರತಿ ಟ್ರಿಪ್‌ಗೆ, 70-200 ಎಂಎಂ ಪ್ರತಿ ಟ್ರಿಪ್‌ಗೆ 500 ರೂ., ಕ್ಯಾಮರಾ ಲೆನ್ಸ್ 200 ಎಎಂಗಿಂತ ಹೆಚ್ಚಿದ್ದರೆ ಪ್ರತಿ ಟ್ರಿಪ್‌ಗೆ 1000 ರೂ. ದರ ನಿಗದಿ ಮಾಡಲಾಗಿದೆ.