ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಬುಧವಾರದಂದು ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 183 ರನ್ ಗಳಿಗೆ ಆಲ್ ಔಟ್ ಆಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು.
ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. ರೋಹಿತ್ ಶರ್ಮಾ ವಿಕೆಟ್ ಬೀಳುತ್ತಿದ್ದರೂ ಬೆನ್ನಲ್ಲೇ ಚೇತೇಶ್ವರ್ ಪೂಜಾರ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಎರಡಂಕಿ ಮುಟ್ಟುವುದಕ್ಕೂ ಮುನ್ನಾ ಪೆವಿಲಿಯನ್ ಸೇರಿಕೊಂಡರು. ಇತ್ತ ನಾಯಕ ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ಮೊದಲನೇ ಎಸೆತದಲ್ಲಿ ಯಾವುದೇ ರನ್ ಗಳಿಸದೆ ಡಕೌಟ್ ಹಾಕುವುದರ ಮೂಲಕ ನಿರಾಸೆ ಮೂಡಿಸಿದರು.
ವಿರಾಟ್ ಕೊಹ್ಲಿ ಗೋಲ್ಡನ್ ಡಕೌಟ್ ಹಾಕುತ್ತಾ ಇದ್ದಂತೆ ಶ್ರೀಲಂಕಾದ ಕ್ರೀಡಾ ತಜ್ಞ ಡೇನಿಯಲ್ ಅಲೆಕ್ಸಾಂಡರ್ ವಿರಾಟ್ ಕೊಹ್ಲಿಯ ಕಾಲೆಳೆದಿದ್ದಾರೆ. ಕೊನೆಗೂ ಭಾರತ ಚಿನ್ನದ ಪದಕ ಗೆದ್ದಿದೆ ಆದರೆ ಒಲಿಂಪಿಕ್ಸ್ ನಲ್ಲಿ ಅಲ್ಲ ಬದಲಾಗಿ ಕ್ರಿಕೆಟ್ನಲ್ಲಿ ಎಂದು ವಿರಾಟ್ ಕೊಹ್ಲಿ ಗೋಲ್ಡನ್ ಡಕ್ ಔಟ್ ಆಗಿದ್ದಕ್ಕೆ ಡೇನಿಯಲ್ ಅಲೆಕ್ಸಾಂಡರ್ ವ್ಯಂಗ್ಯವಾಡಿದ್ದಾರೆ.