ಕೆಜಿಎಫ್ ಮಾಡಿದ್ದ ಹವಾ ನೋಡಿ, ಬಹುಶಃ ಈ ದಾಖಲೆಯನ್ನ ಬೇರೆ ಯಾವ ಚಿತ್ರವೂ ಮುರಿಯಲು ಸಾಧ್ಯವಿಲ್ಲ ಎಂದು ಹೇಳಲಾಗ್ತಿತ್ತು. ಆದ್ರೀಗ, ಆ ಮಾತು ಕೆಲವೇ ದಿನಗಳಲ್ಲಿ ಸುಳ್ಳಾಗಿದೆ.
ಹೌದು, ಕೆಜಿಎಫ್ ನಿರ್ಮಿಸಿದ್ದ ಟ್ರೈಲರ್ ದಾಖಲೆಯನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಯಜಮಾನ ಸಿನಿಮಾ ಅಳಿಸಿಹಾಕಿದೆ. ಈ ಮೂಲಕ ದಾಖಲೆ ಇರೋದೇ ಅಳಿಸಿ ಹಾಕೋಕೆ ಎಂಬುದನ್ನ ಈ ಎರಡು ಚಿತ್ರಗಳು ಸಾಬೀತು ಮಾಡಿದೆ.
ಸದ್ಯ, ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟ್ರೈಲರ್ ಯಾವುದು ಎಂಬ ಪ್ರಶ್ನೆಗೆ ಉತ್ತರ ಡಿ ಬಾಸ್ ಯಜಮಾನ. ಹಾಗಿದ್ರೆ, ಕೆಜಿಎಫ್ ಟ್ರೈಲರ್ ವೀಕ್ಷಣೆ ಎಷ್ಟಿದೆ? ಯಜಮಾನ ಎಷ್ಟಿದೆ? ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಈಗ ಯಜಮಾನ ಹೊಸ ದಾಖಲೆ ಬರೆದಿದ್ದು, ಅತಿ ಹೆಚ್ಚು ವೀಕ್ಷಣೆ ಕಂಡ ಟ್ರೈಲರ್ ಗಳ ಪೈಕಿ ಯಜಮಾನ ಬಾಸ್ ಆಗಿದೆ. ಹೌದು, ಮಾರ್ಚ್ 21ಕ್ಕೆ ಯಜಮಾನ ವೀಕ್ಷಣೆ 18.78 (18,782,116) ಮಿಲಿಯನ್ ಆಗಿದೆ. ಇದು ಕನ್ನಡ ಚಿತ್ರವೊಂದು ಅತಿ ಹೆಚ್ಚು ವೀವ್ಸ್ ಪಡೆದ ಚಿತ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ.
ಟ್ರೈಲರ್ ರಿಲೀಸ್ ಆದಾಗನಿಂದಲೂ ಮೊದಲ ಸ್ಥಾನದಲ್ಲಿದ್ದ ಕೆಜಿಎಫ್ ಟ್ರೈಲರ್ ಅಂತಿಮವಾಗಿ ಹಿಂದೆ ಬಿದ್ದಿದೆ. ದರ್ಶನ್ ಯಜಮಾನ ಚಿತ್ರದ ಟ್ರೈಲರ್ ಅಬ್ಬರದ ಮುಂದೆ ಕೆಜಿಎಫ್ ಗೆ ಹಿನ್ನಡೆಯಾಗಿದೆ. ಸದ್ಯ, ಕೆಜಿಎಫ್ ಟ್ರೈಲರ್ 18.77 (18,770,683) ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.