ಸಿದ್ದರಾಮಯ್ಯ ವಿರೋದ ಪಕ್ಷದ ನಾಯಕರಾಗುತ್ತಿದ್ದಂತೆ ಬಿಜೆಪಿಯ ವಿ.ಸದಾನಂದಗೌಡ, ಸಂಸದರಾದ ಜಿ.ಎಂ..ಸಿದ್ದೇಶ್ವರ್, ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವಾರು ಮಂದಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿಗಿಳಿದಿದ್ದಾರೆ.
ಸಿದ್ದರಾಮಯ್ಯ ಅವರ ಮಗನ ಸಾವಿನ ನಂತರ ಅವರು, ಅಧಿಕಾರ ಕಳೆದುಕೊಂಡ ನಂತರ ಬುದ್ಧಿಭ್ರಮಣೆಯಾಗಿದೆ, ನೀವು ಭೂಮಿ ಮೇಲೆ ಬದುಕಿರಲೇಬಾರದು, ಸಿದ್ದರಾಮಯ್ಯ ದೇಶದ್ರೋಹಿ ಎಂಬಷ್ಟು ಕಠೋರ ಶಬ್ಧಗಳನ್ನು ಬಳಸಿ ವೈಯಕ್ತಿಕ ನಿಂದನೆ ಮಾಡಿದ್ರು ಕಾಂಗ್ರೆಸ್ ನಾಯಕರ್ಯಾರೂ ಬಾಯಿಬಿಡುತ್ತಿಲ್ಲ. ಕೆಲವರಂತೂ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ನಾಯಕರು ನಡೆಸುತ್ತಿರುವ ವಾಗ್ದಾಳಿಯನ್ನು ಕೇಳಿ ಒಳಗೊಳಗೇ ಖುಷಿ ಅನುಭವಿಸುತ್ತಿರುವಂತಿತ್ತು
ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಸ್ಥಾನ ತಪ್ಪಿಸಲು ಮೂಲ ಕಾಂಗ್ರೆಸ್ಸಿಗರು ಸಾಕಷ್ಟು ಹರಸಾಹಸ ನಡೆಸಿದರು. ಆದರೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಗಿಂತ ಪ್ರಭಾವಿ ನಾಯಕರು ಕಾಣಸಿಗದ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ಅವರನ್ನೇ ಹೈಕಮಾಂಡ್ ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ .