ಕೊಪ್ಪಳದಲ್ಲಿ ಕೆಲಸ ಖಾಲಿ; ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಿ

Date:

ಕೊಪ್ಪಳ ಜಿಲ್ಲೆಯ 14 ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರಾಮೀಣ/ ನಗರ ಪುನರ್ವಸತಿ ಕಾರ್ಯಕರ್ತರನ್ನು ನೇಮಕ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತರು ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ವಿಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮ ಪಂಚಾಯತಿಗಳಲ್ಲಿ ಹಾಗೂ ಒಂದು ನಗರ ಸಭೆಯಲ್ಲಿ ಖಾಲಿಯಿರುವ ಗ್ರಾಮೀಣ/ ನಗರ ಪುನರ್ವಸತಿ ಕಾರ್ಯಕರ್ತರನ್ನು ಮಾಸಿಕ ರೂ. 6 ಸಾವಿರಗಳ ತಾತ್ಕಾಲಿಕ ಗೌರವಧನದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಕೊಪ್ಪಳ ನಗರಸಭೆಯಲ್ಲಿ ಒಬ್ಬರು, ಕೊಪ್ಪಳ ತಾಲೂಕಿನ ಬಹದ್ದೂರಬಂಡಿ, ಮತ್ತೂರು, ಚಿಕ್ಕಬೊಮ್ಮನಾಳ, ಹೊಸಳ್ಳಿ, ಕಲ್‌ತಾವರಗೇರಾ ಹಾಗೂ ಇರಕಲ್‌ಗಡಾ ಗ್ರಾಮ ಪಂಚಾಯತಗಳಲ್ಲಿ, ಕುಷ್ಟಗಿ ತಾಲೂಕಿನ ಸಂಗನಾಳ, ಹೂಲಗೇರಿ, ಯಲಬುರ್ಗಾ ತಾಲೂಕಿನ ತಾಳಕೇರಿ, ವಣಗೇರಿ, ಕುಕನೂರು ತಾಲೂಕಿನ ತಳಕಲ್, ಗಂಗಾವತಿ ತಾಲೂಕಿನ ಸಂಗಾಪುರ, ಕಾರಟಗಿ ತಾಲೂಕಿನ ಬೆನ್ನೂರು ಹಾಗೂ ಕನಕಗಿರಿ ತಾಲೂಕಿನ ನವಲಿ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ತಲಾ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿದಾರರು 18 ರಿಂದ 45 ವರ್ಷ ಒಳಗಿನ ನಿರುದ್ಯೋಗಿ ಅಂಗವಿಕಲರಾಗಿರಬೇಕು. ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತೀರ್ಣ/ ಅನುತ್ತೀರ್ಣ ಹೊಂದಿರಬೇಕು. ಅಂಗವಿಕಲರ ಗುರುತಿನ ಚೀಟಿ (ಯುಡಿಐಡಿ ವಿಶೇಷ ಗುರುತಿನ ಚೀಟಿ)ಯನ್ನು ಹೊಂದಿರಬೇಕು ಮತ್ತು ಅದೇ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರಬೇಕು.

ನಗರ ಪುನರ್ವಸತಿ ಕಾರ್ಯಕರ್ತ ಹುದ್ದೆಗೆ ಅರ್ಜಿ ಸಲ್ಲಿಸುವವರು ನಗರ ಪ್ರದೇಶದ ನಿವಾಸಿಯಾಗಿರಬೇಕು. ತಹಶೀಲ್ದಾರರಿಂದ ಪಡೆದ ಜಾತಿ ಮತ್ತು ಆದಾಯ ಮತ್ತು ವಾಸಸ್ಥಳ ಪ್ರಮಾಣ ಪತ್ರವನ್ನು ಅರ್ಜಿ ಜೊತೆ ಲಗತ್ತಿಸಬೇಕು. ವಿಕಲಚೇತನರ ಕಲ್ಯಾಣಕ್ಕಾಗಿ ಕೆಲಸ ಮಾಡಿದ ಅನುಭವವಿದ್ದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಬೇಕು. ವಿಕಲಚೇತನ ಮಹಿಳೆಯರಿಗೂ ಆದ್ಯತೆ ಇದೆ.

ಈ ಹುದ್ದೆಗೆ ಗೌರವಧನದ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಹಾಗೂ ಇದು ತಾತ್ಕಾಲಿಕ ಹುದ್ದೆಯಾಗಿರುತ್ತದೆ. ಅರ್ಹ ವಿಕಲಚೇತನರು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ, ಆಗಸ್ಟ್‌ 31ರೊಳಗೆ ಕಚೇರಿ ಅವಧಿಯಲ್ಲಿ ಸಲ್ಲಿಕೆ ಮಾಡಬೇಕು.

ಅರ್ಜಿಗಳು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಲಭ್ಯವಿದೆ. ತಡವಾಗಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...