ಕೊರೊನಾ ಇಲ್ಲ ಅಂದವ್ರ ಕಪಾಳಕ್ಕೆ ಹಾಕಿ!!

Date:

ಕೊರೊನಾ ಇಲ್ಲ, ಕೊರೊನಾವೈರಸ್ ಫೇಕ್.. ಯಾವ ವೈರಸ್ ಕೂಡ ಇಲ್ಲ ಗುರೂ  ಸುಮ್ಮನೆ ಸುಳ್ಳು ಹೇಳ್ತಿದ್ದಾರೆ ಅಷ್ಟೆ.. ಹೀಗೆ ಹೇಳುವವರಿಗೆ ನಟಿ ಸುನೇತ್ರಾ ಪಂಡಿತ್ ಅವರು ಕಪಾಳಕ್ಕೆ ಹೊಡೆಯಿರಿ ಎಂದು ಗಳಗಳನೆ ಕಣ್ಣೀರಿಡುತ್ತಾ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ನಟಿ ಸುನೇತ್ರಾ ಪಂಡಿತ್ ಅವರು ಈ ರೀತಿ ಅಳುತ್ತಾ ಇಷ್ಟು ಆಕ್ರೋಶವನ್ನು ವ್ಯಕ್ತಪಡಿಸಲು ಕಾರಣವೇನೆಂದರೆ ಅವರ ಅಕ್ಕನ ಸಾವು.

 

 

ಹೌದು 2 ದಿನಗಳ ಹಿಂದೆ ಸುನೇತ್ರಾ ಪಂಡಿತ್ ಅವರ ಅಕ್ಕ ಕೊರೋನಾವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಕೊಡಿಸಲು ಸರಿಯಾದ ಬೆಡ್ ಸಿಗದೇ ಇದ್ದ ಕಾರಣ ಸುನೇತ್ರಾ ಪಂಡಿತ್ ಅವರ ಅಕ್ಕ ಸಾವನ್ನಪ್ಪಿದ್ದು ಅದರ ಆಕ್ರೋಶವನ್ನು ಸುನೇತ್ರಾ ಪಂಡಿತ್ ಅವರು ಮಾಧ್ಯಮಗಳ ಮುಂದೆ ವ್ಯಕ್ತ ಪಡಿಸಿದರು. ಬಿಬಿಎಂಪಿಯವರೇ ದಯವಿಟ್ಟು ಐಸಿಯು ಇರುವ ವಾರ್ಡ್ ಗಳಿಗೆ ಕೊರೋನಾವೈರಸ್ ಸೋಂಕಿತರನ್ನು ಅಡ್ಮಿಟ್ ಮಾಡಿಕೊಳ್ಳಿ, ಬೇರೆ ಕಡೆ ಅಡ್ಮಿಟ್ ಮಾಡಿದರೆ ಅವರು ಸಾವನ್ನಪ್ಪುತ್ತಾರೆ ಎಂದು ಸುನೇತ್ರಾ ಪಂಡಿತ್ ಅವರು ಕಣ್ಣೀರು ಹಾಕಿದರು.

 

 

ಇದೇ ರೀತಿ ನಾನು ನನ್ನ ಅಕ್ಕನನ್ನು ಕಳೆದುಕೊಂಡೆ ಅವರಿಗೆ ಮಕ್ಕಳಿವೆ ಈಗ ಅವರಿಗೆ ಯಾರು ದಿಕ್ಕು? ಕೊರೋನಾವೈರಸ್ ಇಲ್ಲ ಎನ್ನುವವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಸುನೇತ್ರಾ ಪಂಡಿತ್ ಕಣ್ಣೀರು ಹಾಕಿದ್ದಾರೆ. ಸರಿಯಾದ ಆಸ್ಪತ್ರೆ ಸಿಗದೇ ಇದ್ದ ಕಾರಣ ಅಕ್ಕನನ್ನು ಕಳೆದುಕೊಂಡ ಸುನೇತ್ರಾ ಪಂಡಿತ್ ಆಕ್ರೋಶದ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.  ಈಗಲೂ ಸಹ ಕೊರೋನಾವೈರಸ್ ಇಲ್ಲ ಎಂದು ಭಾವಿಸಿ ಬೇಕಾಬಿಟ್ಟಿ ಓಡಾಡುತ್ತಿರುವವರಿಗೆ ಸುನೇತ್ರಾ ಪಂಡಿತ್ ಅವರ ನೋವು ನಿಜಕ್ಕೂ ಕಲಿಯಬೇಕಾದ ಒಂದು ಪಾಠವಾಗಲಿದೆ.

 

ಪ್ರಿಯ ಓದುಗರೇ ನಾವು ಕೇಳಿಕೊಳ್ಳುವುದು ಅಷ್ಟೆ, ಕೊರೋನಾವೈರಸ್ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ ದಯವಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಹೊರಗಡೆ ಹೋಗಬೇಕಾದರೆ ದಯವಿಟ್ಟು ಮಾಸ್ಕ್ ಧರಿಸಿ. ನನಗೆ ತಿಳಿದವರು , ಇವರ ಮನೆಯವರು ನನಗೆ ಗೊತ್ತು, ಅವರಿಗೆ ಕೊರೋನಾ ಇಲ್ಲ ಎಂದು ಅವರ ಬಳಿ ಮಾಸ್ಕ್ ಇಲ್ಲದೆ ಮಾತನಾಡಬೇಡಿ ಪರಿಚಯಸ್ಥರ ಜೊತೆಗೂ ಕೂಡ ಮಾಸ್ ಧರಿಸಿಯೇ ಮಾತನಾಡಿ. ಆದಷ್ಟೂ ಅಗತ್ಯವಿಲ್ಲದ ಭೇಟಿಗಳನ್ನು ಕಡಿಮೆ ಮಾಡಿ ಜಾಗರೂಕರಾಗಿರಿ. ಇದು ನಿಮ್ಮ ‘ದಿ ನ್ಯೂ ಇಂಡಿಯನ್ ಟೈಮ್ಸ್’ ತಂಡದ ಕೋರಿಕೆ..

Share post:

Subscribe

spot_imgspot_img

Popular

More like this
Related

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ “ಸಾಲು ಮರದ ತಿಮ್ಮಕ್ಕ” ಇನ್ನಿಲ್ಲ..!

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ "ಸಾಲು ಮರದ ತಿಮ್ಮಕ್ಕ" ಇನ್ನಿಲ್ಲ..! ಬೆಂಗಳೂರು: ಪದ್ಮಶ್ರೀ ಪುರಸ್ಕೃತ...

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ!

ಬಿಹಾರ ಚುನಾವಣೆ 2025 ಫಲಿತಾಂಶ: ಭರ್ಜರಿ ಮುನ್ನಡೆ ಸಾಧಿಸಿರುವ NDA ಮೈತ್ರಿಕೂಟ! ನವದೆಹಲಿ:...

ರಾಜ್ಯ ಸರ್ಕಾರದಿಂದ 2025ನೇ ಸಾಲಿನ ‘ಸಾರ್ವತ್ರಿಕ ರಜಾ’ ದಿನಗಳ ಪಟ್ಟಿ ಬಿಡುಗಡೆ

ರಾಜ್ಯ ಸರ್ಕಾರದಿಂದ 2025ನೇ ಸಾಲಿನ 'ಸಾರ್ವತ್ರಿಕ ರಜಾ' ದಿನಗಳ ಪಟ್ಟಿ ಬಿಡುಗಡೆ ಕರ್ನಾಟಕ...

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ

ಒತ್ತಡದಿಂದ ಮುಕ್ತಿ ಪಡೆಯಲು ಈ ಪಾನೀಯಗಳನ್ನು ಕುಡಿಯಿರಿ ಇಂದಿನ ವೇಗದ ಜೀವನದಲ್ಲಿ ಬಹುತೇಕ...