ಕೊರೊನಾ ರಣಕೇಕೆಗೆ ಕರುನಾಡು ತತ್ತರ!

Date:

ಕೊರೊನಾ ರಣಕೇಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮಂಗಳವಾರ ಕೂಡಾ ಬರೋಬ್ಬರಿ 44,631 ಹೊಸ ಕೇಸ್‌ಗಳು ರಾಜ್ಯದಲ್ಲಿ ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿನ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 16,90,934ಕ್ಕೆ ಏರಿಕೆ ಕಂಡಿದೆ. ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,64,363ಕ್ಕೆ ಏರಿದೆ.

ಇನ್ನು ಮಂಗಳವಾರ ಒಂದೇ ದಿನ 24,714 ಮಂದಿ ಗುಣಮುಖರಾಗಿರೋದು ಸಮಾಧಾನಕರ ಸಂಗತಿ. ಈ ಮೂಲಕ ರಾಜ್ಯದಲ್ಲಿ ಈವರೆಗೂ 12,10,013 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಎಲ್ಲಕ್ಕಿಂತಾ ಆಘಾತಕಾರಿ ಸಂಗತಿ ಇರೋದು ಸಾವಿನ ಲೆಕ್ಕಾಚಾರದಲ್ಲಿ..! ರಾಜ್ಯದಲ್ಲಿ ಮಂಗಳವಾರ ಒಂದೇ ದಿನ 292 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಒಂದರಲ್ಲೇ 132 ಮಂದಿ ಮೃತಪಟ್ಟಿದ್ಧಾರೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 16,538ಕ್ಕೆ ಏರಿಕೆ ಕಂಡಿದೆ.

ರಾಜ್ಯದಲ್ಲಿ 100 ಮಂದಿಗೆ ಕೊರೊನಾ ವೈರಸ್ ಪತ್ತೆ ಪರೀಕ್ಷೆ ಮಾಡಿಸಿದರೆ, ಈ ಪೈಕಿ 30 ಮಂದಿಗೆ ಸೋಂಕು ತಗುಲಿರೋದು ದೃಢಪಡುತ್ತಿದೆ. ಖಚಿತತೆ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 29.03 ಇರೋದು ಭಾರೀ ಆತಂಕಕ್ಕೆ ಕಾರಣವಾಗಿದೆ.
ಇನ್ನು ಜಿಲ್ಲೆಗಳ ಲೆಕ್ಕಾಚಾರ ನೋಡೋದಾದ್ರೆ, ಮಂಗಳವಾರ ಒಂದೇ ದಿನ 20,870 ಪ್ರಕರಣ ದಾಖಲಾಗಿರುವ ಬೆಂಗಳೂರು ನಗರ ಜಿಲ್ಲೆ ಎಂದಿನಂತೆ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನಕ್ಕಾಗಿ ಹಾಸನ ಹಾಗೂ ಮೈಸೂರು ಪೈಪೋಟಿ ನಡೆಸಿವೆ. ಮೈಸೂರಿನಲ್ಲಿ 2293 ಪ್ರಕರಣ ಪತ್ತೆಯಾಗುವ ಮೂಲಕ 2ನೇ ಸ್ಥಾನದಲ್ಲಿದ್ದರೆ, ಹಾಸನ ಜಿಲ್ಲೆ 2278 ಪ್ರಕರಣ ದೃಢಪಡುವ ಮೂಲಕ 3ನೇ ಸ್ಥಾನದಲ್ಲಿದೆ.
ಇನ್ನುಳಿದಂತೆ ಮಂಡ್ಯ, ಕಲಬುರಗಿ, ತುಮಕೂರು ಹಾಗೂ ಬಳ್ಳಾರಿಯಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನುಳಿದಂತೆ ಯಾವ ಜಿಲ್ಲೆಯಲ್ಲೂ ಮಂಗಳವಾರ ಹೊಸ ಕೊರೊನಾ ಪ್ರಕರಣಗಳು ನಾಲ್ಕಂಕಿ ತಲುಪಿಲ್ಲ. ಆದ್ರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾವಿರದ ಸನಿಹದಲ್ಲಿದ್ದು, ಮಂಗಳವಾರ ಒಂದೇ ದಿನ 996 ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ 985 ಪ್ರಕರಣ ದಾಖಲಾಗಿದೆ.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...