ಕೊರೊನಾ ಲಸಿಕೆ ಎರಡನೇ ಡೋಸ್ ಗೆ ಬೆಂಗಳೂರಲ್ಲೇ ಪರದಾಟ!

0
39

ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ ಪ್ರಮುಖ ಅಸ್ತ್ರ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದರ ಜೊತೆಗೆ ಲಸಿಕೆಯ ಕೊರತೆಯೂ ಎದುರಾಗಿದೆ. ಅದರಲ್ಲೂ ಕೊವ್ಯಾಕ್ಸಿನ್ ಲಸಿಕೆ ಪಡೆದವರು 2ನೇ ಡೋಸ್ ಪಡೆಯಲು ಪರದಾಟ ನಡೆಸುತ್ತಿದ್ದಾರೆ.

ಕೊವ್ಯಾಕ್ಸಿನ್ ಲಸಿಕೆ ಪಡೆಯುವುದು ಈಗ ಅಷ್ಟು ಸುಲಭದ ಮಾತಲ್ಲ. ಮೊದಲ ಡೋಸ್ ಕೊವ್ಯಾಕ್ಸಿನ್ ಪಡೆದವರು ಈಗ 2ನೇ ಡೋಸ್ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ನಗರದಲ್ಲಿಯೇ ಸುಮಾರು 70 ಸಾವಿರ ಜನರಿಗೆ 2ನೇ ಡೋಸ್ ಲಸಿಕೆ ನೀಡಬೇಕಿದೆ.

 

ಕಳೆದ ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 39,000 ಡೋಸ್ ಕೊವ್ಯಾಕ್ಸಿನ್ ಸಂಗ್ರಹ ಇದೆ ಎಂದು ಘೋಷಣೆ ಮಾಡಿತು. ಆದರೆ ಗುರುವಾರ ಬೆಳಗ್ಗೆಯೇ ಸುಮಾರು 70,000 ಜನರಿಗೆ ಕೊವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಬೇಕಾಗಿತ್ತು. ಈ ವಾರ ಇನ್ನೂ ಹೆಚ್ಚಿನ ಜನರು ಕೊವ್ಯಾಕ್ಸಿನ್‌ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ಲಸಿಕೆ ಕೊರತೆಯ ಹಿನ್ನಲೆಯಲ್ಲಿ ಬಿಬಿಎಂಪಿ ಲಭ್ಯವಿರುವ ಕೊವ್ಯಾಕ್ಸಿನ್ ಲಸಿಕೆಯನ್ನು 2ನೇ ಡೋಸ್ ಪಡೆಯುವವರಿಗೆ ಆದ್ಯತೆ ಮೇಲೆ ನೀಡುತ್ತಿದೆ. ಕೊವ್ಯಾಕ್ಸಿನ್ ಲಸಿಕೆ ಕೊರತೆ ಬೆಂಗಳೂರು ಮಾತ್ರವಲ್ಲ ಬೇರೆ ಜಿಲ್ಲೆಗಳಲ್ಲಿಯೂ ಕಂಡುಬಂದಿದೆ. ಇದರಿಂದಾಗಿ 2ನೇ ಡೋಸ್ ಪಡೆಯಲು ಜನರು ಕಾದು ಕೂರುವಂತಾಗಿದೆ.

 

 

LEAVE A REPLY

Please enter your comment!
Please enter your name here