ಕೊರೋನಾ ಲಸಿಕೆಗೆ ಖಾಸಗಿ ಮಾರುಕಟ್ಟೆಯಲ್ಲಿ 1 ಸಾವಿರ ರೂ?
ಒಂದು ವೇಳೆ ಕೇಂದ್ರ ಸರ್ಕಾರ ಕೊರೊನಾ ವೈರಸ್ ಲಸಿಕೆಯನ್ನು ಖಾಸಗಿಯಾಗಿ ಮಾರಾಟ ಮಾಡಲು ಅವಕಾಶ ನೀಡಿದರೆ, ರೀಟೇಲ್ ಮಾರುಕಟ್ಟೆಯಲ್ಲಿ ಪ್ರತಿ ಡೋಸ್‌ಗೆ 1 ಸಾವಿರ ರೂ. ದರ ನಿಗದಿ ಮಾಡಿ ಮಾರಾಟ ಮಾಡೋದಾಗಿ ಸೀರಮ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಘೋಷಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸ್ಥೆಯ ಮುಖ್ಯಸ್ಥ ಅದರ್ ಪೂನಾವಾಲಾ, ಈಗಾಗಲೇ ನಮ್ಮ ಲಸಿಕೆಗೆ ಡಿಜಿಸಿಐ ಅನುಮತಿ ನೀಡಿದೆ. ಸರ್ಕಾರಕ್ಕೆ ನಾವು ವಿಶೇಷ ದರ ನಿಗದಿಪಡಿಸಿದ್ದೇವೆ. ಪ್ರತಿ ಡೋಸ್‌ಗೆ ಕೇವಲ 200 ರೂ. ದರ ನಿಗದಿ ಮಾಡಿದ್ದೇವೆ. ಏಕೆಂದರೆ ಒಮ್ಮೆಲೇ ಕೋಟ್ಯಂತರ ಡೋಸ್‌ಗಳನ್ನು ಖರೀದಿಸಬೇಕಾಗುತ್ತದೆ. ಇದಲ್ಲದೆ ಟೆಂಡರ್ ಪ್ರಕ್ರಿಯೆ ವೇಳೆ ವಿವಿಧ ರೀತಿಯ ದರ ನಿಗದಿ ಆಗಲಿದೆ ಎಂದು ಪೂನಾವಾಲಾ ವಿವರಿಸಿದ್ಧಾರೆ.
ಒಂದು ವೇಳೆ ನಾವು ಸರ್ಕಾರಕ್ಕೆ ಡೋಸ್‌ಗಳನ್ನು ಮಾರಾಟ ಮಾಡಿದರೆ, ಅವರು ಜನರಿಗೆ ಉಚಿತವಾಗಿ ನೀಡುತ್ತಾರೆ. ಅದೇ ವೇಳೆ ಖಾಸಗಿ ಮಾರುಕಟ್ಟೆಯಲ್ಲಿ 1 ಸಾವಿರ ರೂ. ಎಂಆರ್‌ಪಿ ದರಕ್ಕೆ ಪ್ರತಿ ಡೋಸ್ ಮಾರಾಟ ಮಾಡಬಹುದು. ಲಸಿಕೆಯ ಬೂಸ್ಟರ್ ಡೋಸ್ ಕೂಡಾ ಕೊಡಬೇಕಾದ ಕಾರಣ, ಪ್ರತಿಯೊಬ್ಬರಿಗೆ ತಲಾ 2 ಸಾವಿರ ರೂ. ಖರ್ಚಾಗುತ್ತದೆ ಎಂದು ಪೂನಾವಾಲಾ ಹೇಳಿದ್ದಾರೆ.
ಆಕ್ಸ್‌ಫರ್ಡ್ ವಿವಿ ಹಾಗೂ ಔಷಧ ತಯಾರಿಕಾ ಕಂಪನಿ ಆಸ್ಟ್ರಾ ಜೆನಿಕಾ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಸೀರಮ್ ಇನ್ಸ್‌ಸ್ಟಿಟ್ಯೂಟ್, ಬಹಳ ದಿನಗಳ ಹಿಂದೆಯೇ ಲಸಿಕೆ ಅಭಿವೃದ್ಧಿ ಕಾರ್ಯ ಹಾಗೂ ಕ್ಲಿನಿಕಲ್ ಟ್ರಯಲ್‌ಗಳಲ್ಲಿ ತೊಡಗಿತ್ತು. ಇದೀಗ ಸಂಸ್ಥೆ 50 ದಶಲಕ್ಷ ಡೋಸ್‌ಗಳನ್ನು ಸಿದ್ದಪಡಿಸಿದೆ.
ಲಸಿಕೆ ವಿತರಣೆ ಕುರಿತಾದ ಎಲ್ಲಾ ಪ್ರಕ್ರಿಯೆಗಳೂ ಮುಂದಿನ 7 ರಿಂದ 10 ದಿನಗಳ ಒಳಗೆ ಮುಕ್ತಾಯವಾಗುವ ನಿರೀಕ್ಷೆ ಇದೆ. ನಂತರದ ದಿನಗಳಲ್ಲಿ 70 ರಿಂದ 80 ದಶಲಕ್ಷ ಡೋಸ್‌ಗಳನ್ನು ಸಿದ್ದಪಡಿಸಿಲು ಸೀರಮ್ ಇನ್ಸ್‌ಸ್ಟಿಟ್ಯೂಟ್ ನಿರ್ಧರಿಸಿದೆ. ಮುಂದಿನ ಒಂದು ತಿಂಗಳಲ್ಲಿ ಗುರಿ ತಲುಪಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಮಹೇಂದ್ರ ಸಿಂಗ್ ಧೋನಿ ಬೆನ್ನಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ಕಾರಣವೇನುಂಬುದನ್ನು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್‌ಗೆ ಮಹತ್ವದ ಕೊಡುಗೆ ನೀಡಿರುವ ಎಂಎಸ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಎಲ್ಲರಿಗೂ ಆಘಾತ ತಂದಿತ್ತು. ಟೀಮ್ ಇಂಡಿಯಾ ಮಾಜಿ ನಾಯಕ ಹಠಾತ್ ನಿವೃತ್ತಿ ಘೋಷಿಸುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಧೋನಿ ವಿದಾಯ ಹೇಳಿದ ಕೆಲವೇ ನಿಮಿಷಗಳಲ್ಲಿ ರೈನಾ ಕೂಡ ತಮ್ಮ ನಾಯಕನ ಹಾದಿಯನ್ನೇ ತುಳಿದಿದ್ದರು.
2011ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸುರೇಶ್ ರೈನಾ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಒಟ್ಟಾರೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಎಡಗೈ ಆಟಗಾರ 300 ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಶಾರ್ಟ್ ಪಿಚ್ ಎಸೆತಗಳಲ್ಲಿ ದೌರ್ಬಲ್ಯ ಹೊಂದಿದ್ದ ಕಾರಣ ರೈನಾ ಹೆಚ್ಚು ಪಂದ್ಯಗಳಲ್ಲಿ ಮುಂದುವರಿಯಲಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂದುವರಿಯುವ ಸುರೇಶ್ ರೈನಾ, 2021ರ ಆವೃತ್ತಿಯಲ್ಲಿ ಯಾವ ಫ್ರಾಂಚೈಸಿ ಪರ ಆಡಲಿದ್ದಾರೆಂಬ ಬಗ್ಗೆ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಇದಕ್ಕೂ ಮುನ್ನ 2020ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಎಂಎಸ್ ಧೋನಿ ಜತೆ ರೈನಾ ಆಡಬೇಕಾಗಿತ್ತು. ಆದರೆ, ಟೂರ್ನಿ ಆರಂಭಕ್ಕೂ ಮೊದಲೇ ವೈಯಕ್ತಿಕ ಕಾರಣಗಳಿಂದ ರೈನಾ ಯುಎಇಯಿಂದ ತವರಿಗೆ ಮರಳಿದ್ದರು.
ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಸೂಕ್ತ ಸಮಯವಾಗಿತ್ತು. ಆದರೆ ಎಂ ಎಸ್ ಧೋನಿ ಅವರೊಂದಿಗಿನ ಸ್ನೇಹ ಇದಕ್ಕಿಂತಲೂ ವಿಭಿನ್ನವಾದದ್ದು. ನಾವಿಬ್ಬರೂ ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಹಲವು ಪ್ರಶಸ್ತಿಗಳನ್ನು ಒಟ್ಟಾಗಿ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಯೋಜನೆಗೆ ತಕ್ಕಂತೆ ಎಲ್ಲವೂ ನಡೆಯಲಿದೆ ಎಂದು ಸುರೇಶ್ ರೈನಾ ಭಾವಿಸಿದ್ದಾರೆ.
“ಇಂಟರ್ ನ್ಯಾಷನಲ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಸೂಕ್ತ ಸಮಯ ಎಂಬ ಭಾವನೆ ನನ್ನಲ್ಲಿ ಉಂಟಾಗಿತ್ತು. ದೇಶಕ್ಕೆ ಹಾಗೂ ಐಪಿಎಲ್‌ನಲ್ಲಿ ಇಬ್ಬರೂ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಖಚಿತವಾಗಿಯೂ ಮುಂದೆ ನಾವು ಭೇಟಿಯಾಗಲು ಯೋಜನೆ ರೂಪಿಸುತ್ತೇವೆ. ಸಂಗತಿಗಳು ಉತ್ತಮವಾಗಿರುತ್ತವೆ ಮತ್ತು ಯೋಜನೆಯ ಪ್ರಕಾರ ಎಲ್ಲವೂ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಸುರೇಶ್ ರೈನಾ ತಿಳಿಸಿದ್ದಾರೆ.