ಇಡೀ ವಿಶ್ವ ಕೊರೋನಾ ವೈರಸ್ಸಿಂದ ತತ್ತರಿಸಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ಹೆಮ್ಮಾರಿ ಕೊರೋನಾದಿಂದ ಹೈರಾಣಾಗಿವೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಪರಿಸ್ಥಿತಿ ಅರಿತು ನಿಯಂತ್ರಣಕ್ಕೆ ಲಾಕ್ ಡೌನ್ ಮೊರೆ ಹೋಗಿವೆ. ಆದರೆ, ವಿಶ್ವದ ಕೆಲವು ರಾಷ್ಟ್ರಗಳು ಮಾತ್ರ ಕೊರೋನಾ ಹಾವಳಿ ಇಲ್ಲದೆ ನೆಮ್ಮದಿಯಾಗಿವೆ.ಅವುಗಳಲ್ಲಿ ಕೆಲವೊಂದಿಷ್ಟು ಕೊರೋನಾ ಶಂಕೆ ಕಂಡು ಬಂದಿದ್ದರೂ ನೆಗಿಟೀವ್ ರಿಪೋರ್ಟ್ ಬಂದಿವೆ. ಅಂಥಾ ದೇಶಗಳು ಯಾವುವು ಅಂತ ಇಲ್ಲಿವೆ ನೋಡಿ
ಸಿರಿಯಾ : ಸಿರಿಯಾ ಕೊರೋನಾ ಕಾಟ ಇಲ್ಲದ ದೇಶ. ಇಲ್ಲಿ ಇಬ್ಬರು ಶಂಕಿತರಿದ್ದರು. ಆದರೆ, ವರದಿ ಪಾಸಿಟಿವ್ ಬರಲಿಲ್ಲ. ಆ ಎರಡೂ ಪ್ರಕರಣಗಳು ನ್ಯುಮೋನಿಯಾ ಎಂದು ದೃಢಪಟ್ಟಿವೆ.
ಲಾವೂ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ : ಈ ರಾಷ್ಟ್ರದಲ್ಲಿ 50 ಮಂದಿ ಕೊರೋನಾಗೆ ತುತ್ತಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಪರೀಕ್ಷೆಯಿಂದ ನೆಗಿಟೀವ್ ವರದಿ ಬಂದಿದೆ. ಆಸ್ಟ್ರೇಲಿಯಾದ ಡಬ್ಲ್ಯು ಎಚ್ ಒ ಲ್ಯಾಬ್ ಗೆ ಪರೀಕ್ಷೆಗೆ ಕಳುಹಿಸಲಾಗಿ..ಅಲ್ಲಿಯೂ ನೆಗಿಟೀವ್ ವರದಿ ಬಂದಿದೆ.
ರಿಪಬ್ಲಿಕ್ ಆಫ್ ಮಾರ್ಷಲ್ ಐಲ್ಯಾಂಡ್ಸ್ : ಇಲ್ಲಿ ಮಾರ್ಚ್ 9 ರಂದು 66 ವರ್ಷದ ವ್ಯಕ್ತಿಯನ್ನು ಕೊರೋನಾ ಶಂಕೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪರೀಕ್ಷೆ ವರದಿ ನೆಗಿಟೀವ್ ಎಂದು ಬಂದಿದೆ.
ಸೋಲೋಮನ್ ಐಲ್ಯಾಂಡ್ಸ್ : ಈ ದೇಶದಲ್ಲಿ ಹೊರಗಿನಿಂದ ಬಂದ ಹಡಗಿನಲ್ಲಿದ್ದ ನಾಲ್ವರಲ್ಲಿ ಕೊರೋನಾ ಲಕ್ಷಣಗಳಿದ್ದವು. ಆದರೆ, ಪರೀಕ್ಷೆ ಬಳಿಕ ಕೊರೋನಾ ಅಲ್ಲ ಎಂದು ತಿಳಿದುಬಂದಿತು.
ಟೋಂಗಾ : ಈ ರಾಷ್ಟ್ರದಲ್ಲಿ 19 ವರ್ಷದ ಯುವತಿಗೆ ಕೊರೋನಾ ಲಕ್ಷಣಗಳು ಕಂಡುಬಂದಿದ್ದವು. ಆಕೆ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳನ್ನು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗೆ ಕಳುಹಿಸಲಾಗಿತ್ತು. ಆದರೆ, ಕೊರೋನಾ ಅಲ್ಲ ಎಂದು ವರದಿ ಬಂದಿತ್ತು.
ಅಂಗೋಲಾ : ಈ ದೇಶದಲ್ಲೂ ಕೆಲವರಲ್ಲಿ ಕೊರೋನಾ ಲಕ್ಷಣಗಳು ಕಂಡುಬಂದಿದ್ದವು. ಎಲ್ಲಾ ನೆಗಿಟೀವ್ ರಿಪೋರ್ಟ್ ಬಂದಿವೆ. ಚೀನಾದಿಂದ ಆಗಮಿಸುವವರನ್ನು ಇಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ.
ಬಾರ್ಬಡೋಸ್ : ಚೀನಾದಲ್ಲಿ ಕೊರೋನಾ ಕಂಡು ಬಂದ ಕೂಡಲೇ ಈ ರಾಷ್ಟ್ರ ಅಲರ್ಟ್ ಆಯಿತು. ಮುಂಜಾಗೃತ ಕ್ರಮ ಕೈಗೊಂಡಿತು.
ರಿಪಬ್ಲಿಕ್ ಆಫ್ ಪಲೌ : ಈ ದೇಶದಲ್ಲೂ ಕೂಡ ಒಂದೇ ಒಂದು ಕೊರೋನಾ ಪ್ರಕರಣ ಕಂಡು ಬಂದಿಲ್ಲ.
ಮ್ಯಾನ್ಮಾರ್ : ಚೀನಾದಿಂದ ಇಲ್ಲಿಗೆ ಬಂದ ಒಬ್ಬ ವ್ಯಕ್ತಿಯಲ್ಲಿ ಕೊರೋನಾ ಶಂಕೆ ಕಂಡುಬಂದಿತ್ತು. ಆದರೆ, ಅದು ನೆಗಿಟೀವ್ ಎಂದು ರಿಪೋರ್ಟ್ ಬಂದಿದೆ. ಆತ ಬಂದಿದ್ದ ವಿಮಾನದಿಂದ ಇಬ್ಬರನ್ನು ಮಾತ್ರ ಕೆಳಕ್ಕಿಳಿಸಲಾಯಿತು. ಉಳಿದವರನ್ನು ವಾಪಸ್ ಕಳುಹಿಸಿದ್ದಾರೆ
ಫಿಜಿ : ಈ ರಾಷ್ಟ್ರದಲ್ಲಿ ಫೆಬ್ರವರಿ 19 ರಂದು ಜಪಾನಿಂದ ವಾಪಸ್ಸಾದ 37 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಲಕ್ಷಣಗಳು ಕಂಡು ಬಂದಿದ್ದವು. ಆದರೆ, ಮೆಲ್ಬೋರ್ನ್ ಡಬ್ಲ್ಯು ಎಚ್ ಒ ವರದಿಯಿಂದ ನೆಗಿಟೀವ್ ರಿಪೋರ್ಟ್ ಬಂದಿದೆ. ನಂತರ ಚೀನಾದಿಂದ ಬಂದ ಆರು ಮಂದಿಯಲ್ಲೂ ನೆಗಿಟೀವ್ ವರದಿ ಬಂದಿದೆ.
ಹೀಗೆ ಈ ರಾಷ್ಟ್ರಗಳು ಸದ್ಯ ಕೊರೋನಾ ಹಾವಳಿ ಇಲ್ಲದೆ ನೆಮ್ಮದಿಯಿಂದಿವೆ.