ನವದೆಹಲಿ: ಸರ್ಕಾರದ ವಿನಾಶಕಾರಿ ನೀತಿಯಿಂದಾಗಿ ಕೊರೊನಾ ಮೂರನೇ ಅಲೆ ಅಪ್ಪಳಿಸುವುದು ಖಚಿತ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕವಾಗಿ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಲಸಿಕೆ ವಿತರಣಾ ಯೋಜನೆ ಬಗ್ಗೆ ಮಾತನಾಡಿರುವ ರಾಹುಲ್ ಗಾಂಧಿ ಸರ್ಕಾರದ ವಿನಾಶಕಾರಿ ನೀತಿ, ಸಂತ್ರಸ್ತರ ಶವ ನದಿಯಲ್ಲಿ ತೇಲುತ್ತಿರುವುದರ ಕುರಿತಾಗಿ ಗಂಗಾ ಮಾತೆ ದುಃಖಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಭಾರತ ಸರ್ಕಾರದ ಲಸಿಕೆ ವಿತರಣಾ ಯೋಜನೆ ವಿನಾಶಕಾರಿ ಮೂರನೇ ಅಲೆಯನ್ನು ಖಚಿತಪಡಿಸುತ್ತದೆ. ಇದನ್ನು ಮತ್ತೆ ಸರಿದೂಗಿಸಲು ಅಸಾಧ್ಯ. ಭಾರತಕ್ಕೆ ಸರಿಯಾದ ಲಸಿಕೆ ವಿತರಣೆ ಯೋಜನೆಯ ಅಗತ್ಯವಿದೆ ಎಂದು ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
ಗಂಗಾ ನದಿಯ ಉದ್ದಕ್ಕೂ 1140 ಕಿ.ಮೀ ಪ್ರದೇಶದಲ್ಲಿ 2 ಸಾವಿರಕ್ಕೂ ಹೆಚ್ಚು ಶವಗಳು ಪತ್ತೆಯಾಗಿವೆ ಎಂದು ಹೇಳುವ ಮಾಧ್ಯಮ ವರದಿಗಳನ್ನು ಟ್ಯಾಗ್ ಮಾಡಿ, ಗಂಗಾ ಎಂದು ಹೇಳುತ್ತಿದ್ದ ಒಬ್ಬರು ಇಂದು ತಾಯಿ ಗಂಗಾ ಮಾತೆಯನ್ನು ದುಃಖಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಲಸಿಕೆ ಯೋಜನೆ ಮತ್ತು ಸಾಂಕ್ರಾಮಿಕ ರೋಗವನ್ನು ನಿಭಾಯಿಸುವ ಬಗ್ಗೆ ರಾಹುಲ್ ಹಾಗೂ ಅವರ ಕಾಂಗ್ರೆಸ್ ಪಕ್ಷ ಪ್ರಧಾನಿ ಮತ್ತು ಅವರ ಸರ್ಕಾರದ ವಿರುದ್ಧ ಕಟುಟೀಕೆ ಮಾಡುತ್ತಿದೆ.