ಕೊಲೆ ಬೆದರಿಕೆ ಹಾಕಿದ್ರಾ ಕೋಟಿಗೊಬ್ಬ 3 ನಿರ್ಮಾಪಕ?

Date:

ವಿತರಕರ ಸಮಸ್ಯೆಯಿಂದ ‘ಕೋಟಿಗೊಬ್ಬ 3’ ಸಿನಿಮಾ ಬಿಡುಗಡೆ ಒಂದು ದಿನ ತಡವಾಗಿದ್ದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಿನಿಮಾದ ವಿತರಕರ ಹಿಂದೆ ಯಾರಿದ್ದಾರೆ? ವಿತರಕರು ಏಕೆ ಹೀಗೆ ಮಾಡಿದರು? ‘ಕೋಟಿಗೊಬ್ಬ 3’ಗೆ ತೊಂದರೆ ಕೊಡಲು ಯತ್ನಿಸಿದ ಹಿರಿಯ ವಿತರಕ ಯಾರು? ಸುದೀಪ್ ಮುಂದಿನ ನಡೆ ಏನು? ಹಲವು ವಿಷಯಗಳು ಚರ್ಚೆಗೆ ಬರುತ್ತಿವೆ.

ಇಬ್ಬರು ವಿತರಕರು ಬಾಕಿ ಹಣ ನೀಡದ ಕಾರಣ ಸಿನಿಮಾ ಬಿಡುಗಡೆ ಆಗಲಿಲ್ಲವೆಂದು ನಿನ್ನೆಯೇ ಸೂರಪ್ಪ ಬಾಬು ಹೇಳಿದ್ದರು. ಚಿತ್ರದುರ್ಗ ಹಾಗೂ ಮೈಸೂರು ಭಾಗದ ವಿತರಕರು ಬಾಕಿ ಹಣವನ್ನು ಸೂರಪ್ಪ ಬಾಬುಗೆ ನೀಡದ ಕಾರಣ ಸಿನಿಮಾ ಬಿಡುಗಡೆ ಆಗಿರಲಿಲ್ಲ.

 

ಅಕ್ಟೋಬರ್ 15 ರಂದು ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುತ್ತಿದೆ. ಈ ನಡುವೆ ನಿರ್ಮಾಪಕ ಸೂರಪ್ಪ ಬಾಬು ತಮಗೆ ಮೋಸ ಮಾಡಿದ ಇಬ್ಬರು ವಿತರಕರ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ. ಇಬ್ಬರು ವಿತರಕರಿಂದ ನನಗೆ 10 ಕೋಟಿ ನಷ್ಟವಾಗಿದೆ ಎಂದು ಸೂರಪ್ಪ ಬಾಬು ಆರೋಪಿಸಿದ್ದಾರೆ. ಈ ನಡುವೆ ಸೂರಪ್ಪ ಬಾಬು ವಿರುದ್ಧವೂ ಆ ಇಬ್ಬರು ವಿತರಕರು ದೂರು ನೀಡಲು ಮುಂದಾಗಿದ್ದಾರೆ.

 

ಚಿತ್ರದುರ್ಗದ ಖಾಜಾಫೀರ್ ಅವರು ಚಿತ್ರದುರ್ಗ, ಬಳ್ಳಾರಿ, ದಾವಣಗೆರೆಗೆ ವಿತರಣೆ ಮಾಡಲು ಒಪ್ಪಂದ ಮಾಡಿಕೊಂಡಿದ್ದರು. 1.30 ಲಕ್ಷ ರು ಹಣಕ್ಕೆ ಒಪ್ಪಂದ ಮಾಡಿಕೊಂಡಿದ್ದರು. 11 ಲಕ್ಷ ಹಣವನ್ನು ನಿರ್ಮಾಪಕರಿಗೆ ನೀಡಿದ್ದರು ಸಹ ಆದರೆ ಉಳಿದ ಹಣವನ್ನು ನಿರ್ಮಾಪಕರಿಗೆ ನೀಡದ ಕಾರಣ ಅವರಿಗೆ ಲೈಸೆನ್ಸ್ ನೀಡಿರಲಿಲ್ಲ. ಹಾಗಾಗಿ ಸಿನಿಮಾ ಬಿಡುಗಡೆ ಆಗಲಿಲ್ಲ. ಆ ನಂತರ ಆ ಭಾಗದ ವಿತರಣೆಯನ್ನು ಸುದೀಪ್ ಆಪ್ತ ಜಾಕ್ ಮಂಜು ಹಾಗೂ ಎಂ.ಬಿ ಬಾಬು ನೀಡಲಾಗಿದೆ.

ಈಗ ತಾವು ಕೊಟ್ಟಿರುವ ಹಣವನ್ನು ಖಾಜಾಪೀರ್, ಸೂರಪ್ಪ ಬಾಬು ಬಳಿ ವಾಪಸ್ ಕೇಳಿದ್ದಕ್ಕೆ ಆ ಹಣವನ್ನು ತಾವು ವಾಪಸ್ ಕೊಡುವುದಿಲ್ಲ ಎಂದು ಹೇಳಿದ್ದಾರಂತೆ. ಈ ಬಗ್ಗೆ ಮಾತನಾಡಿರುವ ಖಾಜಾಪೀರ್, ”ನಾನು ಕಾಳಿಂಗ ಆಡ್ಸ್ ಮೂಲಕ ರಾಂಬಾಬು ಫಿಲಮ್ಸ್‌ಗೆ 11 ಲಕ್ಷ ಹಣ ವರ್ಗಾವಣೆ ಮಾಡಿದ್ದೀನಿ. ಅದರ ದಾಖಲೆ ನನ್ನ ಬಳಿ ಇದೆ. ಈಗ ನಾನು ಕೊಟ್ಟಿರುವ ಹಣ ವಾಪಸ್ ಕೇಳಿದ್ದಕ್ಕೆ ಕೊಡುವುದಿಲ್ಲವೆಂದು ಸೂರಪ್ಪ ಬಾಬು ಹೇಳಿದ್ದಾರೆ” ಎಂದಿದ್ದಾರೆ.

 

”ವಕೀಲರ ಬಳಿ ಡ್ರಾಫ್ಟ್ ಮಾಡಿಸಿದ್ದೀನಿ ಬಂದು ಸಹಿ ಮಾಡಿ ಹೋಗಿ. ಇಲ್ಲವಾದರೆ ನಿಮಗೆ ಚಿತ್ರದುರ್ಗ ಬಿಡಿಸ್ತೀನಿ” ಎಂದು ಧಮ್ಕಿ ಹಾಕಿದ್ದಾರೆ ಎಂದಿರುವ ಖಾಜಾಫೀರ್, ”ನೀವು ಕೊಟ್ಟಿರುವ ಹಣ ಯಾವ ಕಾರಣಕ್ಕೂ ವಾಪಸ್ ಬರುವುದಿಲ್ಲ. ದುಡ್ಡು ಕೇಳಿದರೆ ನಾನೇ ಬಂದು ಹೊಡೀತೀನಿ. ಸುದೀಪ್ ಅಭಿಮಾನಿಗಳನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುತ್ತೀನಿ” ಎಂದು ಬೆದರಿಕೆ ಹಾಗಿದ್ದಾರೆ ಎಂದು ಖಾಜಾಫೀರ್ ಹೇಳಿದ್ದಾರೆ.

 

ಖಾಜಾಫೀರ್‌ಗೆ ಮಾತ್ರವೇ ಅಲ್ಲದೆ ಕುಮಾರ್ ಫಿಲಮ್ಸ್‌ನ ಕುಮಾರ್‌ಗೂ ಸೂರಪ್ಪ ಬಾಬು ಬೆದರಿಕೆ ಹಾಕಿದ್ದಾರೆ. ಸೂರಪ್ಪ ಬಾಬು ತಮ್ಮ ಬಳಿ ಮಾತನಾಡಿರುವ ಆಡಿಯೋವನ್ನು ಬಿಡುಗಡೆ ಮಾಡಿದ್ದು, ಚಿತ್ರದುರ್ಗದ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಸೂರಪ್ಪ ಬಾಬು ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...