ಕೊಹ್ಲಿಯನ್ನು ಕೆಳಗಿಳಿಸಿ ರೋಹಿತ್​ಗೆ ಕ್ಯಾಪ್ಟನ್ ಪಟ್ಟ..?!

Date:

ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಭಾರತ ನ್ಯೂಜಿಲೆಂಡ್​ ವಿರುದ್ಧ 18ರನ್​ಗಳಿಂದ ಸೋತು ಟೂರ್ನಿಯಿಂದ ಹೊರಬೀಳುತ್ತಿದ್ದಂತೆ ಭಾರತ ತಂಡದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಬಗ್ಗೆ ಚರ್ಚೆ ಆಗುತ್ತಿದೆ.
ಒಂದೆಡೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಬಿಸಿಸಿಐ ಆ ಸ್ಲಾಟ್ನಲ್ಲಿ ಪ್ರಮುಖ ಬದಲಾವಣೆ ಮಾಡಲು ನಿಶ್ಚಯಿಸಿರುವ ಬಗ್ಗೆ ನಿನ್ನೆಯೇ ಸುದ್ದಿ ಓದಿದ್ದೀರಿ. ವಿಶ್ವಕಪ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದ ದಿನೇಶ್ ಕಾರ್ತಿಕ್, ಆಲ್​​​ರೌಂಡರ್ ಕೇದಾರ್ವ ಜಾಧವ್ ಕರಿಯರ್ ಕೂಡ ಅಂತ್ಯವಾಗುವ ಸಾಧ್ಯತೆ ಇದೆ. ಸೆಮಿಫೈನಲ್​ನಲ್ಲಿ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ವಿರಾಟ್​ ಕೊಹ್ಲಿ ಬೇಗ ಪೆವಿಲಿಯನ್ ಸೇರಿದಾಗ ದಿನೇಶ್ ಕಾರ್ತಿಕ್ ತಮ್ಮ ಅನುಭವದ ಧಾರೆ ಎರೆದು ತಂಡಕ್ಕೆ ಆಧಾರವಾಗ ಬೇಕಿತ್ತು. ಆದರೆ, ದಿನೇಶ್ ಕಷ್ಟಪಟ್ಟು 6ರನ್ ಮಾಡಿ ನನ್ನಿಂದ ಆಗಲ್ಲ ಎಂದು ಪೆವಿಲಿಯನ್ ಸೇರಿ ಬಿಟ್ರು..! ಇದರಿಂದ ಟೀಮ್ ಇಂಡಿಯಾದ ಬಾಗಿಲು ದಿನೇಶ್ ಪಾಲಿಗೆ ಕ್ಲೋಸ್ ಆಗುವ ಸಾಧ್ಯತೆ ಇದೆ.
ಕನ್ನಡಿಗರಾದ ಮನೀಷ್ ಪಾಂಡೆ, ಮಯಾಂಕ್ ಅಗರ್​ವಾಲ್​ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಕಾಯ್ತಿದ್ದಾರೆ. ಸಂಜು ಸ್ಯಾಮ್ಸನ್, ಶ್ರೇಯಸ್ ಅಯ್ಯರ್​ ಗೆ ಮಣೆ ಹಾಕಲು ಚಿಂತನೆ ನಡೆದಿದೆ. ಮುಂಬರುವರ ಟಿ20 ವಿಶ್ವಕಪ್​ಗೆ ತಂಡವನ್ನು ಬಲ ಪಡಿಸಲು ಬಿಸಿಸಿಐ ಚಿಂತನೆ ನಡೆಸಿದೆ.


ಈ ಬೆನ್ನಲ್ಲೇ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿ ಹಿಟ್​ ಮ್ಯಾನ್​ ರೋಹಿತ್ ಶರ್ಮಾ ಅವರಿಗೆ ಪಟ್ಟಕಟ್ಟುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದ್ದು, ಬಿಸಿಸಿಐ ಕೂಡ ಈ ಬಗ್ಗೆ ಯೋಚನೆ ಮಾಡಿದೆ ಎನ್ನಲಾಗುತ್ತಿದೆ.
ವಿರಾಟ್ ಕೊಹ್ಲಿ ನಾಯಕನಾಗಿ ಯಶಸ್ಸು ಕಂಡಿದ್ದರೂ ಅದರ ಹಿಂದಿನ ಶಕ್ತಿ ಧೋನಿ ಎನ್ನುವುದು ಜಗಜ್ಜಾಹಿರ. ವರ್ಲ್ಡ್​​ಕಪ್​ನಲ್ಲಿ ಅಪ್ಘಾನಿಸ್ತಾನ ವಿರುದ್ಧದ ಮ್ಯಾಚ್​ನಲ್ಲಿ ಕೊನೆಯ ಹಂತದಲ್ಲಿ ಭಾರತ ಸೋಲಿನ ಸುಳಿಗೆ ಸಿಲುಕಿದ್ದಾಗ ಶಮಿಗೆ ಬೌಲಿಂಗ್ ಮಾಡಲು ಹೇಳಿ ಆತ್ಮವಿಶ್ವಾಸ ತುಂಬಿದ್ದು ಧೋನಿಯೇ.ಇದು ಒಂದು ಉದಾಹರಣೆ ಮಾತ್ರ, ವಿರಾಟ್ ಯಶಸ್ಸಿನ ಹಿಂದಿನ ಗುಟ್ಟು ಧೋನಿ ಎಂದು ಎಲ್ಲರಿಗೂ ಗೊತ್ತಿದೆ.
ರೋಹಿತ್ ಶರ್ಮಾ 8 ಏಕದಿನ ಮ್ಯಾಚ್​ಗಳಲ್ಲಿ ಭಾರತವನ್ನು ಮುನ್ನಡೆಸಿದ್ದು ಕೇವಲ 1ರಲ್ಲಿ ಮಾತ್ರ ಸೋತಿದ್ದಾರೆ. 15 ಟಿ20 ಮ್ಯಾಚ್ ಗಳಲ್ಲಿ ರೋಹಿತ್ ನಾಯಕತ್ವದಲ್ಲಿ ಭಾರತ 12 ಪಂದ್ಯಗಳನ್ನು ಗೆದ್ದಿದೆ.
ಐಪಿಎಲ್​ನಲ್ಲಿ ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿಗಿಂತ ಮುಂಬೈ ನಾಯಕ ರೋಹಿತ್ ಶರ್ಮಾ ಯಶಸ್ವಿ ನಾಯಕ ಎನಿಸಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ಲೆಕ್ಕಾಚಾರದಲ್ಲಿ ಕೊಹ್ಲಿಗಿಂತ ರೋಹಿತ್ ಶರ್ಮಾನೇ ಬೆಟರ್ ಅಂತ ಹೇಳಲಾಗುತ್ತಿದೆ. ಅವರಿಗೇ ಪಟ್ಟ ಕಟ್ಟುವ ಸಾಧ್ಯತೆ ಇದೆ. ಇನ್ನು ಟೆಸ್ಟ್​ ಗೆ ಅಜಿಂಕ್ಯಾ ರಹಾನೆಗೆ ಸಾರಥ್ಯವಹಿಸುವ ಚಿಂತನೆಯೂ ನಡೆದಿದೆ ಎನ್ನಲಾಗುತ್ತಿದೆ.
ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಟೀಮ್ ಇಂಡಿಯಾ ಆಯ್ಕೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

Share post:

Subscribe

spot_imgspot_img

Popular

More like this
Related

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...

TNIT South Indian Media Award ಯಶಸ್ವಿ

TNIT South Indian Media Award ಯಶಸ್ವಿಯಾಗಿ ಮೂಡಿಬಂದಿದೆ. ಈ ಯಶಸ್ಸಿಗೆ...

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್

ಭೂಮಿ ಗಡಿ ಹಾಕುವುದಿಲ್ಲ, ಮನುಷ್ಯನೇ ಗಡಿ ಹಾಕುತ್ತಾನೆ: ಬಾನು ಮುಷ್ತಾಕ್ ಮೈಸೂರು: ಭೂಮಿ...

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್

ಮೈಸೂರು ದಸರಾ ಮಹತೋತ್ಸವ’ ಉದ್ಘಾಟಿಸಿದ ಸಾಹಿತಿ ಬಾನು ಮುಷ್ತಾಕ್ ಮೈಸೂರು: ನಾಡದೇವತೆ ಚಾಮುಂಡೇಶ್ವರಿ...