ಐಪಿಎಲ್ ದೆಹಲಿ ಕ್ಯಾಪ್ಟಿಲ್ ತಂಡದಲ್ಲಿ ರಿಷಬ್ ಪಂತ್ ಆಡುತ್ತಿದ್ದಾರೆ. ದೆಹಲಿ ಕ್ಯಾಪ್ಟಿಲ್ ವೆಬ್‍ಸೈಟ್ ನ ಸಂದರ್ಶನದ ವೇಳೆ ಮಾತನಾಡುತ್ತಾ ವಿರಾಟ್ ಕೊಹ್ಲಿ ಅವರ ಕೋಪ ನೋಡಿದ್ರೆ ನನಗೆ ಭಯವಾಗುತ್ತದೆ ಎಂದು ರಿಷಬ್ ಪಂತ್ ಹೇಳಿದ್ದಾರೆ.
ಮೈದಾನದಲ್ಲಿ ಮತ್ತು ಹೊರಗೆ ನಾನು ಯಾರಿಗೂ ಹೆದರುವುದಿಲ್ಲ. ಆದ್ರೆ ಮೈದಾನದಲ್ಲಿ ವಿರಾಟ್ ಕೋಪ ಮಾಡಿಕೊಂಡ್ರೆ ಭಯವಾಗುತ್ತದೆ. ನಾವು ಸರಿಯಾಗಿ ಆಡಿದರೆ ಕೊಹ್ಲಿ ಕೋಪಗೊಳ್ಳುವುದಿಲ್ಲ ಆದ್ರೆ ಕೆಲ ಬಾರಿ ತಪ್ಪು ಮಾಡಿದಾಗ ಇತರೆ ಆಟಗಾರರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ. ಅಂತಹ ತಪ್ಪುಗಳಾದಾಗ ನಾಯಕನಾದವರನಮಗೆ ಹೇಳಿದಾಗ ಅರ್ಥವಾಗುತ್ತದೆ ಜೊತೆಗೆ ತಪ್ಪಿನ ಅರಿವು ನಮಗಾಗುತ್ತದೆ ಎಂದು ಹೇಳಿದ್ದಾರೆ.
ಇದರೊಂದಿಗೆ ಕೊಹ್ಲಿ ಕಂಡರೆ ನನಗೆ ಭಯ ಎನ್ನುವುದನ್ನು ರಿಷಬ್ ಪಂತ್ ಒಪ್ಪಿಕೊಂಡಿದ್ದಾರೆ