ಕೊಹ್ಲಿ ಜೊತೆಗಿನ ವಿವಾದದ ಬಗ್ಗೆ ಮೌನ ಮುರಿದ ಸೂರ್ಯ..!

Date:

13 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ವಿರಾಟ್‌ ಕೊಹ್ಲಿ ಅವರೊಂದಿಗೆ ನಡೆದಿದ್ದ ವಿವಾದದ ಬಗ್ಗೆ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಯಾದವ್ ಕೊನೆಗೂ ಮೌನ ಮುರಿದಿದ್ದಾರೆ.

ಶೇಖ್‌ ಝಾಹೇದ್‌ ಕ್ರೀಡಾಂಗಣದಲ್ಲಿ ಆರ್‌ಸಿಬಿ ನೀಡಿದ್ದ 165 ರನ್‌ಗಳ ಗುರಿ ಹಿಂಬಾಲಿಸಿದ ಮುಂಬೈ ಇಂಡಿಯನ್ಸ್ ಪರ ಸೂರ್ಯಕುಮಾರ್‌ ಯಾದವ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಯಾದವ್‌, 43 ಎಸೆತಗಳಲ್ಲಿ 79 ರನ್‌ಗಳನ್ನು ಗಳಿಸಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆ ಮುಂಬೈ ಇಂಡಿಯನ್ಸ್‌ಗೆ ಗೆಲುವು ತಂದುಕೊಟ್ಟಿದ್ದರು.
ಮುಂಬೈ ಇನಿಂಗ್ಸ್‌ನ 13ನೇ ಓವರ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ಕವರ್ಸ್ ಕಡೆ ಚೆಂಡನ್ನು ಹೊಡೆದರು. ಚೆಂಡು ವಿರಾಟ್‌ ಕೊಹ್ಲಿ ಕೈಗೆ ತಲುಪಿತು. ಚೆಂಡನ್ನು ಎತ್ತಿಕೊಂಡ ಆರ್‌ಸಿಬಿ ನಾಯಕ, ನೇರವಾಗಿ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್‌ ಸಮೀಪ ತೆರಳಿದರು ಹಾಗೂ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮೂಲಕ ವಿಭಿನ್ನ ರೀತಿಯಲ್ಲಿ ಸ್ಲೆಡ್ಜ್‌ ಮಾಡಿದರು. ಈ ವೇಳೆ ಸ್ವಲ್ಪ ಹೊತ್ತು ಕೊಹ್ಲಿಯನ್ನೇ ನೋಡುತ್ತಿದ್ದ ಸೂರ್ಯಕುಮಾರ್ ಯಾದವ್‌, ಏನನ್ನೂ ಹೇಳದೆ ಬಲಗಡೆಗೆ ನಡೆದುಕೊಂಡು ಹೋದರು.

ಈ ವಿವಾದದ ವಿಡಿಯೋ ಟ್ವಿಟರ್ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿತ್ತು. ಇದರೊಂದಿಗೆ ವಿರಾಟ್‌ ಕೊಹ್ಲಿಯನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದರು. ಈ ವಿಡಿಯೋವನ್ನು ಮಿಲಿಯನ್‌ ಗಟ್ಟಲೇ ಜನ ವೀಕ್ಷಿಸಿದ್ದರು. ಈ ವಿವಾದದ ಬಗ್ಗೆ ಸೂರ್ಯಕುಮಾರ್‌ ಯಾದವ್‌ ಕೊನೆಗೂ ಮೌನ ಮುರಿದಿದ್ದಾರೆ.

ಸ್ಪೋರ್ಟ್ಸ್‌ ತಕ್‌ ಜತೆ ಮಾತನಾಡಿದ ಅವರು, “ನಿಜಕ್ಕೂ ಆ ಘಟನೆ ಮೋಜಿನಿಂದ ಕೂಡಿತ್ತು. ಆರ್‌ಸಿಬಿ ವಿರುದ್ಧದ ಅಂದಿನ ಪಂದ್ಯದಲ್ಲಿ ನನ್ನ ಮೇಲೆ ಒತ್ತಡವಿತ್ತು ಹಾಗೂ ಜವಾಬ್ದಾರಿಯಿತ್ತು. ಈ ಪಂದ್ಯವನ್ನು ನಾವು ಗೆದ್ದರೆ, ಪಾಯಿಂಟ್ಸ್‌ ಟೇಬಲ್‌ನಲ್ಲಿ ನಮ್ಮ ತಂಡ ಅಗ್ರ ಸ್ಥಾನಕ್ಕೇರುತ್ತಿತ್ತು. ಹಾಗಾಗಿ, ಕೆಟ್ಟದಾಗಿ ರನ್‌ಗಳನ್ನು ಗಳಿಸುವ ಅವಶ್ಯಕತೆ ನನಗಿತ್ತು. ಅದರಂತೆ ತಂಡದ ಗೆಲುವಿಗೆ ನೆರವಾಗಿದ್ದು ಅಂದು ತುಂಬಾ ಖುಷಿ ನೀಡಿತ್ತು,” ಎಂದು ಹೇಳಿದರು.
“ವಿರಾಟ್‌ ಕೊಹ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದಾಗಿನಿಂದಲೂ ಅವರನ್ನು ನಾನು ನೋಡುತ್ತಿದ್ದೇನೆ, ಹಾಗಾಗಿ ಎರಡೂ ತುದಿಗಳಿಂದ ವಿನೋದವು ಸಹಜವಾಗಿತ್ತು. ಯಾವುದೇ ತಂಡದ ಪರ ಅಥವಾ ಯಾವುದೇ ಸ್ವರೂಪದಲ್ಲಿ ಆಡಿದರೂ ಕೊಹ್ಲಿ ಶಕ್ತಿ, ಪ್ರಾಬಲ್ಯ ಗುರುತಿಸಲ್ಪಡುತ್ತದೆ. ಆ ವೇಳೆ ನಾನು ತುಂಬಾ ಸಂತೋಷವಾಗಿದ್ದೆ ಹಾಗೂ ನನ್ನ ಹೆಗಲ ಮೇಲೆ ತುಂಬಾ ಜವಾಬ್ದಾರಿ ಇರುವುದರಿಂದ ಆಗ ಬಹಳಷ್ಟು ಉತ್ಸಕನಾಗಿದ್ದೆ. ಆಗ ಮುಂಬೈ ಇಂಡಿಯನ್ಸ್ ಗೆಲ್ಲಿಸಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನಕ್ಕೇರಿಸಿದರೆ ನನ್ನ ಪಾಲಿಗೆ ಅದ್ಭುತವಾಗಿರುತ್ತದೆ ಎಂದು ಆಲೋಚನ ಮಾಡಿದ್ದೆ,” ಎಂದರು.
“ಅಂದಿನ ಪಂದ್ಯದ ಬಳಿಕ ನಮ್ಮ ತಂಡದ ಬಳಿ ಹೆಜ್ಜೆ ಹಾಕಿದ ವಿರಾಟ್‌ ಕೊಹ್ಲಿ, ‘ತುಂಬಾ ಚೆನ್ನಾಗಿ ಆಡಿದ್ದೀರಿ, ಅದ್ಭುತ ಬ್ಯಾಟಿಂಗ್‌ ಹಾಗೂ ಎಲ್ಲಾ ವಿಷಯಗಳು,’ ಎಂದಿದ್ದರು. ಎಲ್ಲಾ ದಿನಗಳಂತೆ ಹೇಗೆ ಸ್ನೇಹಿತರಂತೆ ಭೇಟಿಯಾಗುತ್ತೇವೆ ಹಾಗೂ ಒಟ್ಟಾಗಿ ಅಭ್ಯಾಸ ಮಾಡುತ್ತೇವೆ ಅಂದಿನ ದಿನವೂ ಅದೇ ರೀತಿ ಕೂಡಿತ್ತು. 60 ರಿಂದ 65 ನಿಮಿಷಗಳ ಕಾಲ ನಾನು ಬ್ಯಾಟಿಂಗ್‌ ಮಾಡಿದ್ದೆ. ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು ಆದರೆ ಆ ಇನಿಂಗ್ಸ್‌ನಲ್ಲಿ ಆನಂದಿಸಿದ್ದೇನೆ,” ಎಂದು ಸೂರ್ಯಕುಮಾರ್‌ ಯಾದವ್‌ ತಿಳಿಸಿದರು.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...