ಕೊಹ್ಲಿ ಮನೆಯಲ್ಲಿ ಆಳೇ ಇಲ್ವಂತೆ..!

Date:

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನೆಯಲ್ಲಿ ಯಾರೂ ಕೆಲಸದವರು ಇಲ್ಲವಂತೆ. ಕೋಟಿ ಕೋಟಿ ರೂಪಾಯಿ ಕಮಾಯಿ ಮಾಡುವ ವಿರಾಟ್ ಹಾಗೂ ಅನುಷ್ಕಾ ಮನೆಯಲ್ಲಿ ಯಾಕೆ ಆಳುಗಳನ್ನು ಇಟ್ಟುಕೊಂಡಿಲ್ಲ ಎಂಬ ಪ್ರಶ್ನೆ ಮೂಡುವುದು.

ಮಾಜಿ ಭಾರತೀಯ ಕ್ರಿಕೆಟರ್ ಆಗಿರುವ ಸರಂದೀಪ್ ಸಿಂಗ್ ಅವರು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾರ ವಿಧೇಯವಾಗಿರುವ ಗುಣದ ಬಗ್ಗೆ ಮಾತನಾಡಿದ್ದಾರೆ. ಅನುಷ್ಕಾ ಹಾಗೂ ವಿರಾಟ್‌ಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಈ ದಂಪತಿಗೆ ವಿರುಷ್ಕಾ ಎಂದು ಪ್ರೀತಿಯಿಂದ ಅಭಿಮಾನಿಗಳು ಕರೆಯುತ್ತಾರೆ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮನೆಯಲ್ಲಿ ಏನಾದರೂ ಸಮಾರಂಭ ನಡೆದರೆ ಅತಿಥಿಗಳಿಗೆ ಅವರೇ ಊಟವನ್ನು ಬಡಿಸುತ್ತಾರೆ. ಭಾರತೀಯ ಕ್ರಿಕೆಟ್ ಟೀಂನ ಗಟ್ಟಿ ಸ್ತಂಭದಂತಿರುವ ವಿರಾಟ್ ಕೊಹ್ಲಿಗೆ ಸ್ವಲ್ಪವೂ ಅಹಂಕಾರ ಇಲ್ಲ ಎಂದು ಸರಂದೀಪ್ ಹೇಳಿದ್ದಾರೆ. ಎಲ್ಲರಿಗೂ ವಿರಾಟ್, ಅನುಷ್ಕಾ ದಂಪತಿ ಸಮನಾದ ಗೌರವ ನೀಡುತ್ತಾರೆ ಎಂದು ಹೇಳುವುದು.

‘ವಿರಾಟ್ ಮನೆಯಲ್ಲಿ ಯಾರೂ ಕೆಲಸದವರಿಲ್ಲ. ಅವರು ಹಾಗೂ ಅವರ ಪತ್ನಿ ಊಟವನ್ನು ಎಲ್ಲರಿಗೂ ಬಡಿಸುತ್ತಾರೆ. ನಿಮಗೆ ಇನ್ನೇನು ಬೇಕು? ವಿರಾಟ್ ನಿಮ್ಮ ಜೊತೆಗೆ ಕೂತ್ಕೊಂಡು, ಮಾತನಾಡುತ್ತಾರೆ, ಹೊರಗಡೆ ನಿಮ್ಮ ಜೊತೆ ಊಟ ಕೂಡ ಮಾಡುತ್ತಾರೆ. ಎಲ್ಲ ಆಟಗಾರರೂ ಅವರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ವಿರಾಟ್ ಅವರು ತುಂಬ ಒಳ್ಳೆಯ ವ್ಯಕ್ತಿ’ ಎಂದು ಸರಂದೀಪ್ ಹೇಳಿದ್ದಾರೆ.

ಇನ್ನು ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ವಾಮಿಕಾ ಎಂದು ಮಗಳಿಗೆ ಹೆಸರಿಟ್ಟಿದ್ದಾರೆ. ಮಗಳ ಮುಖವನ್ನು ವಿರುಷ್ಕಾ ಇದುವರೆಗೂ ತೋರಿಸಿಲ್ಲ. ಸಾರ್ವಜನಿಕ ಜೀವನ, ಬಣ್ಣದ ಲೋಕದಿಂದ ಮಗಳನ್ನು ದೂರವಿಟ್ಟು ಸಂಸ್ಕಾರಯುತವಾಗಿ ಬೆಳೆಸುವುದಾಗಿ ಹೇಳಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...