ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಮೊದಲ ಎರಡೂ ಮ್ಯಾಚುಗಳಲ್ಲೂ ವಿರಾಟ್ ಕೊಹ್ಲಿ ಪಡೆ ಗೆದ್ದು ಬೀಗಿದೆ. ಇನ್ನು ಬಾಕಿ ಉಳಿದಿರುವ ಮೂರು ಪಂದ್ಯಗಳಲ್ಲಿ ಒಂದು ಪಂದ್ಯ ಗೆದ್ದರೆ ಸರಣಿ ಗೆದ್ದಂತಾಗುತ್ತದೆ. ಈಗ ಎರಡು ಪಂದ್ಯಗಳಲ್ಲಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್. ಮೊದಲ ಪಂದ್ಯದಲ್ಲಿ ಅಯ್ಯರ್ ಪಂದ್ಯಶ್ರೇಷ್ಠರಾದರೆ, ಎರಡನೇ ಪಂದ್ಯದಲ್ಲಿ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ರಾಹುಲ್ ಸತತ ಎರಡು ಮ್ಯಾಚ್ಗಳಲ್ಲೂ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಕೂಡ ಟಿ20ಯಲ್ಲಿ ಸತತ ಎರಡು ಹಾಫ್ ಸೆಂಚುರಿ ಬಾರಿಸಿಲ್ಲ. ರಾಹುಲ್ ಆ ಸಾಧನೆ ಮಾಡಿದ್ದಾರೆ.
ಈ ಎಲ್ಲಾ ದಾಖಲೆಗಳು ಗೆಲುವಿನ ನಡುವೆ ನಾಯಕ ವಿರಾಟ್ ಕೊಹ್ಲಿ ಮಾಡಿದ ಒಂದು ತಪ್ಪಿಗೆ ಎಲ್ಲಾ ಸಹ ಆಟಗಾರರು ತಲೆ ತಗ್ಗಿಸಿದ್ದಾರೆ. ಹೌದು, ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಫೀಲ್ಡರ್ಗಳಲ್ಲಿ ಒಬ್ಬರು. ಅಂಥಾ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಸುಲಭದ ಕ್ಯಾಚ್ ಕೈ ಚೆಲ್ಲಿದರು. 18ನೇ ಓವರ್ನಲ್ಲಿ ಜಸ್ಪ್ರೀತ್ ಬುಮ್ರಾರ 3ನೇ ಬಾಲ್ನಲ್ಲಿ ಸಿಕ್ಸ್ ಬಾರಿಸಲು ರಾಸ್ ಟೇಲರ್ ಮುಂದಾಗಿದ್ರು. ಆದರೆ ಅದು ವಿರಾಟ್ ಕೊಹ್ಲಿಯತ್ತ ಚಿಮ್ಮಿತು. ಆಗ ವಿರಾಟ್ ಅದನ್ನು ಸುಲಭವಾಗಿ ಹಿಡಿಯುತ್ತಾರೆಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ, ವಿರಾಟ್ ಕ್ಯಾಚ್ ಕೈಚೆಲ್ಲಿದರು ಆಗ ಎಲ್ಲರ ತಲೆ ತಗ್ಗಿಸಿ, ಬೇಸರ ಪಟ್ಟರು. ಕೊಹ್ಲಿ ಆ ಕ್ಯಾಚ್ ಪಡೆದಿದ್ದರೆ ನ್ಯೂಜಿಲೆಂಡ್ 132ರನ್ ಕೂಡ ಮಾಡ್ತಿರ್ಲಿಲ್ಲ.
https://twitter.com/barainishant/status/1221351491312799746?s=19