ಕೊಹ್ಲಿ – ರಹಾನೆ ನಡುವಿನ ನಾಯಕತ್ವದ ವ್ಯತ್ಯಾಸ ಏನ್ ಗೊತ್ತಾ?

Date:

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಶೇನ್ ಲೀ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇಬ್ಬರು ಆಟಗಾರರು ನಾಯಕನಾಗಿ ಮುನ್ನಡೆಸುವ ರೀತಿಯ ಬಗ್ಗೆ ಶೇನ್ ಲೀ ಮಾತನಾಡಿದ್ದು ಕೊಹ್ಲಿಗಿಂತ ರಹಾನೆ ಉತ್ತಮ ನಾಯಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಟಗಾರರು ಗೆರೆ ದಾಟಲು ಭಯಪಡುತ್ತಾರೆ. ಭಾರತೀಯ ತಂಡದಿಂದ ಅವರು ಸಂಪೂರ್ಣವಾದ ವೃತ್ತಿಪರತೆಯನ್ನು ಅವರು ಬಯಸುತ್ತಾರೆ. ಆಟಗಾರರು ಸಂಪೂರ್ಣ ಫಿಟ್ ಆಗಿರಬೇಕು, ಅಂಗಳದಲ್ಲಿ ಶ್ರೇಷ್ಠ ಆಟವನ್ನು ಪ್ರದರ್ಶಿಸಬೇಕು, ಉತ್ತಮ ಕ್ಯಾಚ್ ಪಡೆಯಬೇಕು, ಆದರೆ ಆಟಗಾರರು ಸ್ವಲ್ಪ ಭಯದಲ್ಲಿದ್ದಂತೆ ಕಂಡು ಬರುತ್ತಾರೆ. ಆದರೆ ರಹಾನೆ ನಾಯಕತ್ವದಲ್ಲಿ ಅವರೆಲ್ಲರೂ ನಿರಾಳರಾಗಿರುವಂತೆ ತೋರುತ್ತದೆ” ಎಂದು ಹೇಳಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸುತ್ತಾರೆಯೇ ಎಂಬ ಪ್ರಶ್ನೆಯನ್ನು ಅವರೇ ಹಾಕಿಕೊಂಡ ಶೇನ್ ಲೀ, ನನಗೆ ಆ ಬಗ್ಗೆ ಅನುಮಾನವಿದೆ. ನಾನು ಭಾರತೀಯ ತಂಡದ ಆಯ್ಕೆಗಾರನಾಗಿದ್ದರೆ ನಾನು ವಿರಾಟ್ ಕೊಹ್ಲಿಯ ಬದಲಿಗೆ ಅಜಿಂಕ್ಯ ರಹಾನೆಯನ್ನು ಆಯ್ಕೆ ಮಾಡಿರುತ್ತಿದ್ದೆ. ಕೊಹ್ಲಿಗೆ ಸಂಪೂರ್ಣ ಪ್ರಮಾಣದ ಬ್ಯಾಟಿಂಗ್ ಪ್ರದರ್ಶನಕ್ಕೆ ಬಿಟ್ಟುಬಿಡುತ್ತಿದ್ದೆ. ಆಗ ತಂಡದ ಪ್ರದರ್ಶನ ಇನ್ನುಷ್ಟು ಉತ್ತಮವಾಗಿರುತ್ತಿತ್ತು. ಆದರೆ ಸಮಯವೇ ಎಲ್ಲವನ್ನೂ ಹೇಳಲಿದೆ ” ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೇಟ್‌ ಲೀ ಅವರ ಸೋದರನಾಗಿರುವ ಶೇನ್ ಲೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ಬಳಿಕ ತವರಿಗೆ ವಾಪಾಸಾಗಿದ್ದರು. ಆ ಬಳಿಕ ನಾಯಕತ್ವ ವಹಿಸಿಕೊಂಡ ಅಜಿಂಕ್ಯ ರಹಾನೆ ಮೊದಲ ಟೆಸ್ಟ್ ಪಂದ್ಯದ ಆಘಾತಕಾರಿ ಸೋಲಿನ ನಂತರವೂ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಲು ಯಶಸ್ವಿಯಾಗಿದ್ದರು. ಹೀಗಾಗಿ ಅಜಿಂಕ್ಯ ರಹಾನೆ ನೇತೃತ್ವದ ಟೀಮ್ ಇಂಡಿಯಾ ಟೆಸ್ಟ ಸರಣಿಯನ್ನು ಗೆದ್ದು ಬೀಗಿತ್ತು.

ಸದ್ಯ ಟೀಮ್ ಇಂಡಿಯಾ ಮತ್ತೊಂದು ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ಧಾರಿಗೆ ವಿರಾಟ್ ಕೊಹ್ಲಿ ಮತ್ತೊಮ್ಮೆ ಮರಳಿದ್ದಾರೆ. ತವರಿನಲ್ಲಿ ನಡೆಯುವ ಈ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಯಾವ ರೀತಿಯ ಪ್ರದರ್ಶನ ನೀಡಲಿದ ಎಂಬುದು ಕೂತೂಹಲ ಮೂಡಿಸಿದೆ.


ಕಳೆದ 25 ವರ್ಷಗಳಿಂದಲೂ ಪ್ರೇಕ್ಷಕರನ್ನು ರಂಜಿಸುತ್ತ ಬಂದಿರುವ ಕಿಚ್ಚ ಸುದೀಪ್‌ ಅವರಿಗೆ ಈಗ ಚಿತ್ರರಂಗದಲ್ಲಿ ಬೆಳ್ಳಿಹಬ್ಬದ ಸಂಭ್ರಮ. ಆ ಸಲುವಾಗಿ ದುಬೈನ ಬುರ್ಜ್‌ ಖಲೀಫಾ ಕಟ್ಟಡದ ಮೇಲೆ ಅವರ ಕಟೌಟ್‌ ಮತ್ತು ‘ವಿಕ್ರಾಂತ್ ರೋಣ’ ಸಿನಿಮಾದ ಟೈಟಲ್‌ ಲೋಗೋ ರಾರಾಜಿಸಿದೆ. ಈ ಸಂದರ್ಭದಲ್ಲಿ ಅನೇಕ ಪರಭಾಷೆಯ ಕಲಾವಿದರು ಕೂಡ ಕಿಚ್ಚನಿಗೆ ವಿಶ್‌ ಮಾಡಿದ್ದಾರೆ.
ಟಾಲಿವುಡ್‌ನ ಖ್ಯಾತ ನಿರ್ದೇಶಕ ಸುರೇಂದರ್‌ ರೆಡ್ಡಿ, ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ, ಕ್ರಿಕೆಟಿಗ ಅನಿಲ್‌ ಕುಂಬ್ಳೆ, ಟಾಲಿವುಡ್‌ ನಟ ಸಾಯಿ ಧರಮ್‌ ತೇಜ್‌ ಸೇರಿದಂತೆ ಅನೇಕರು ಕಿಚ್ಚನಿಗೆ ಶುಭ ಕೋರಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ‘ಅನ್ನಪೂರ್ಣ ಸ್ಟುಡಿಯೋಸ್‌’ ಕಡೆಯಿಂದಲೂ ಸುದೀಪ್‌ಗೆ ಅಭಿನಂದನೆ ಸಲ್ಲಿಕೆ ಆಗಿದೆ. ರಮೇಶ್‌ ಅರವಿಂದ್‌, ಶಿವರಾಜ್‌ಕುಮಾರ್‌, ಉಪೇಂದ್ರ, ಗಣೇಶ್‌, ವಸಿಷ್ಠ ಸಿಂಹ ಸೇರಿದಂತೆ ಅನೇಕರು ಶುಭಾಶಯ ತಿಳಿಸಿದ್ದಾರೆ.

 

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...