ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಈ ಸಲ ಏನಾದ್ರು ಮಾಡಿ ಇಂಗ್ಲೆಂಡ್ನಿಂದ ವಿಶ್ವಕಪ್ ಗೆದ್ದುಕೊಂಡೇ ಬರಬೇಕು ಎಂದು ಡಿಸೈಡ್ ಮಾಡಿ ಸ್ಟ್ರಾಂಗ್ ಟೀಮ್ ಮಾಡ್ಕೊಂಡು ಇಂಗ್ಲೆಂಡ್ಗೆ ಹೋಗಿದ್ದರು.
ಲೀಗ್ನಲ್ಲಿ ವಿರಾಟ್ ಪಡೆ ಭರ್ಜರಿ ಪ್ರದರ್ಶನವನ್ನೇ ನೀಡಿತ್ತು. ಅಂಕಪಟ್ಟಿಯಲ್ಲಿ ನಂಬರ್ 1 ಸ್ಥಾನದೊಂದಿಗೆ ಸೆಮಿಫೈನಲ್ಗೆ ಲಗ್ಗೆ ಇಟ್ರೂ ಕೂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಸೋಲನುಭವಿಸಿ ಟೂರ್ನಿಯಿಂದ ಹೊರ ಬಂತು.
ವಿಶ್ವಕಪ್ ಸೋಲಿನ ಬೆನ್ನಲ್ಲೇ ಭಾರತ ತಂಡದಲ್ಲಿ ಭಾರೀ ಬದಲಾವಣೆ ಮಾತುಗಳು ಕೇಳಿ ಬರುತ್ತಿವೆ. ಆ ನಿಟ್ಟಿನಲ್ಲಿ ವೆಸ್ಟ್ಇಂಡೀಸ್ ಟೂರಿಗೂ ಒಂದಿಷ್ಟು ಮಂದಿ ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಿ ರೋಹಿತ್ ಶರ್ಮಾ ಅವರ ಸಾರಥ್ಯದಲ್ಲಿ ವಿಂಡೀಸ್ಗೆ ಟೀಮ್ ಕಳುಹಿಸಿಕೊಡಲಾಗುತ್ತದೆ ಎನ್ನಲಾಗಿತ್ತು.
ಅದಲ್ಲದೆ ವಿರಾಟ್ ಗೆ ಟೆಸ್ಟ್ ನಾಯಕತ್ವವನ್ನು ಮಾತ್ರ ನೀಡಿ ರೋಹಿತ್ ಶರ್ಮಾಗೆ ಏಕದಿನ ಮತ್ತು ಟಿ20ಗ ಖಾಯಂ ಸಾರಥ್ಯ ನೀಡುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಇದೇ ಮಾತುಗಳಿಂದ ಬಹುಶಃ ಕೊಹ್ಲಿ ವಿಂಡೀಸ್ ಗೆ ಪ್ರಯಾಣ ಬೆಳೆಸಿರಬಹುದು. ಒಂದು ವೇಳೆ ರೋಹಿತ್ ಕ್ಲಿಕ್ ಆದ್ರೆ ತನ್ನ ಸ್ಥಾನಕ್ಕೆ ಕುತ್ತು ಪಕ್ಕಾ.. ವಿಂಡೀಸ್ ಟೂರ್ನಲ್ಲಿ ತನ್ನನ್ನು ತಾನು ಪ್ರೂವ್ ಮಾಡಿ ಖಾಯಂ ನಾಯಕನಾಗಿ ಉಳಿದುಕೊಳ್ಳುವ ಉದ್ದೇಶದಿಂದ ವಿಶ್ರಾಂತಿ ಬಯಸದೆ ವಿಂಡೀಸ್ ವಿರುದ್ಧ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಮಾಜಿ ನಾಯಕ ಧೋನಿಯೂ ಟೀಮ್ ನಲ್ಲಿ ಇಲ್ಲ. ಹೀಗಾಗಿ ಇಲ್ಲಿ ರೋಹಿತ್ ಗೆ ನಾಯಕತ್ವದ ನಿಜವಾದ ಅಗ್ನಿಪರೀಕ್ಷೆ ಎದುರಾಗಲಿದೆ.