ಕೊಹ್ಲಿ ವಿರುದ್ಧ ಗರಂ ಆಗಿರುವುದೇಕೆ ಸೆಹ್ವಾಗ್..!

0
131

ಕೊಹ್ಲಿ ವಿರುದ್ಧ ಗರಂ ಆಗಿರುವುದೇಕೆ ಸೆಹ್ವಾಗ್..!

ಟೀಮ್‌ ಇಂಡಿಯಾ ಕ್ಯಾಪ್ಟನ್ ವಿರಾಟ್‌ ಕೊಹ್ಲಿ ಪದೇ ಪದೇ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ತರುವುದನ್ನು ಅಭ್ಯಾಸ ಮಾಡಿಕೊಂಡಿರುವುದಕ್ಕೆ ಮಾಜಿ ಓಪನರ್‌ ವೀರೇಂದ್ರ ಸೆಹ್ವಾಗ್‌ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.‌
ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟಿ20 ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಯುವ ಪ್ರತಿಭೆ ಶ್ರೇಯಸ್‌ ಅಯ್ಯರ್‌ ಅವರನ್ನು ಆಡುವ 11ರ ಬಳಗದಿಂದ ಹೊರಗಿಟ್ಟ ಬೆನ್ನಲ್ಲೇ ವಿರಾಟ್ ವಿರುದ್ಧ ವೀರೂ ಗುಡುಗಿದ್ದಾರೆ. ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಬದಲಿಗೆ ಮನೀಶ್‌ ಪಾಂಡೆಯನ್ನು ಆಡಿಸಲಾಗಿತ್ತು.
ಕಳೆದ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಶ್ರೇಯಸ್‌ ಅಯ್ಯರ್‌, ಇತ್ತೀಚೆಗೆ ಅಂತ್ಯಗೊಂಡ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ 500ಕ್ಕೂ ಹೆಚ್ಚು ರನ್‌ ಗಳಿಸಿದ್ದರು. ಹೀಗಾಗಿ ಉತ್ತಮ ಲಯದಲ್ಲಿರುವ ಅಯ್ಯರ್‌ ಅವರನ್ನು ಆಡಿಸದೇ ಹೋದದ್ದು ಸೆಹ್ವಾಗ್‌ ಅಸಮಾಧಾನಕ್ಕೆ ಕಾರಣವಾಗಿದೆ.
ಅಂದಹಾಗೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಆರಂಭಕ್ಕೂ ಮುನ್ನ ನಡೆದ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಅಯ್ಯರ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಒಡಿಐ ಸರಣಿಯ ಮೂರು ಪಂದ್ಯಗಳಲ್ಲಿ ಅಯ್ಯರ್‌ ಕ್ರಮವಾಗಿ 2, 38 ಮತ್ತು 19 ರನ್‌ಗಳನ್ನು ಗಳಿಸಿದ್ದರು.
ಈ ಬಗ್ಗೆ ಕಟುವಾಗಿ ಟೀಕಿಸಿರುವ ಡ್ಯಾಷಿಂಗ್‌ ಓಪನರ್‌ ಖ್ಯಾತಿಯ ಮಾಜಿ ಕ್ರಿಕೆಟಿಗ ಶ್ರೇಯಸ್‌ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡಲು ಕಾರಣವೇ ಇಲ್ಲ. ಎಲ್ಲರಿಗೂ ಒಂದು ನಿಯಮವಿದ್ದರೆ, ಆ ನಿಯಮಗಳು ಕೊಹ್ಲಿಗೆ ಅನ್ವಯಿಸುವುದಿಲ್ಲ ಎಂದು ಜಾಡಿಸಿದ್ದಾರೆ.
“ಶ್ರೇಯಸ್‌ ಅಯ್ಯರ್‌ ಬಗ್ಗೆ ಮಾತನಾಡುವುದಾದರೆ ಹಿಂದಿನ ಟಿ20 ಸರಣಿಯಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಿರುವಾಗ ಯಾವ ಆಧಾರದ ಮೇಲೆ ಅವರನ್ನು ತಂಡದ ಪ್ಲೇಯಿಂಗ್‌ ಇಲೆವೆನ್‌ನಿಂದ ಕೈಬಿಡುತ್ತೀರಿ?. ಇದಕ್ಕೇನಾದರೂ ಕಾರಣ ಇದೆಯೇ? ತಮ್ಮನ್ನು ಪ್ಲೇಯಿಂಗ್‌ ಇಲೆವೆನ್‌ನಿಂದ ಕೈಬಿಟ್ಟಿದ್ದೇಕೆ ಎಂದು ಕೇಳುವ ಧೈರ್ಯ ಶ್ರೇಯಸ್‌ ಅಯ್ಯರ್‌ಗಂತೂ ಇಲ್ಲ’ ಎಂದು ವೀರೂ ಹೇಳಿದ್ದಾರೆ.

ಪ್ಲಾಸ್ಟಿಕ್ ಬಾಟಲಿಗೇಕೆ ಪೆಟ್ರೋಲ್ ತುಂಬಬಾರದು?

ಮಾರ್ಗಮಧ್ಯದಲ್ಲಿ ಪೆಟ್ರೋಲ್ ಕಾಲಿಯಾಗಿ ನಿಮ್ಮ ಗಾಡಿ ಕೈ ಕೊಡುತ್ತೆ. ಆಗ ನೀವು ನಿಮ್ಮ ಬಳಿಯ ಕಾಲಿ ನೀರಿನ ಬಾಟಲಿಲಿ ಹತ್ತಿರದ ಪೆಟ್ರೋಲ್ ಬಂಕ್ ಗೆ ಹೋಗಿ ಪೆಟ್ರೋಲ್ ತುಂಬಿಸಿಕೊಳ್ತೀರಿ. ಆದರೆ, ನಿಮಗೆ ಗೊತ್ತೇ? ಕಾಲಿ ನೀರಿ ಬಾಟಲಿಲಿ‌ ಪೆಟ್ರೋಲ್ ತುಂಬಿಸೋದು ತಪ್ಪು , ಅದು‌ ಕಾನೂನು ಬಾಹಿರವೂ ಹೌದು‌ .


ಯಸ್, ಆಯಿಲ್ ಮಾರ್ಕೆಟಿಂಗ್ ಕಂಪನಿ ಮಾಜಿ ಸೇಲ್ಸ್ ಎಕ್ಸಿಕ್ಯೂಟಿವ್ ಶಿವಂ ಚಾವ್ಲಾ ಅವರು ಹೇಳುವಂತೆ ಭಾರತದಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗೆ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ತುಂಬಿಸೋದು ಇಲೀಗಲ್ …! ಆದರೆ, 2002ರ ಪೆಟ್ರೋಲಿಯಂ ನಿಯಮಗಳ ಸೆಕ್ಷನ್ 8 ರ ಪ್ರಕಾರ ಗ್ಲಾಸ್ವೇರ್ ಅಥವಾ ಸ್ಟೋನ್ ವೇರ್ ಬಾಟಲಿಗಳಲ್ಲಿ 1 ಲೀಟರ್ ವರೆಗೆ ಹಾಗೂ ಲೋಹದ ಕ್ಯಾನ್ (ಮೆಟಲ್ ಕ್ಯಾನ್) ಗಳಲ್ಲಿ 25 ಲೀಟರ್ ವರೆಗೆ ಖರೀದಿಸಲು ಪರವಾನಗಿ (ಲೈಸೆನ್ಸ್) ಇದೆ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪೆಟ್ರೋಲ್ ಏಕೆ ತುಂಬಿಸಬಾರದು?

1) ಪರವಾನಗಿ ಅಥವಾ ಲೈಸೆನ್ಸ್ ಮಿತಿ ಉಲ್ಲಂಘನೆ
: ಪೆಟ್ರೋಲ್ ಬಂಕ್ ಗಳು ಪಿಇಎಸ್ಒ ( PESO) (Petroleum and Explosive Safety Organization) ನಿಯಂತ್ರಣದಲ್ಲಿವೆ. ಆದ್ದರಿಂದ ಕೆಲವು ನಿಯಮಗಳನ್ನು ಪಾಲಿಸಲೇ ಬೇಕು‌.
ಈ ಮೊದಲೇ ಹೇಳಿದಂತೆ 2002ರ ಪ್ರೆಟೋಲಿಯಂ ನಿಯಮಗಳ ಪ್ರಕಾರ ಪೆಟ್ರೋಲ್ ಪಂಪ್ ಗಳಿಗೆ ಕೇವಲ ವಾಹನಗಳ ಟ್ಯಾಂಕ್ ಗಳಿಗೆ ಮಾತ್ರ ಪೆಟ್ರೋಲ್ ಫಿಲ್ ಮಾಡುವ ಲೈಸೆನ್ಸ್ ನೀಡಲಾಗಿದೆ. ಅದೇರೀತಿ ಗ್ಲಾಸ್ವೇರ್, ಸ್ಟೋನ್ ವೇರ್ ಬಾಟಲಿಗಳಿಗೆ 1 ಲೀಟರ್ ವರೆಗೆ, ಮೆಟಲ್ ಕ್ಯಾನ್ ಗಳಿಗೆ 25 ಲೀಟರ್ ತನಕ ತುಂಬ ಬಹುದು.

2) ಪ್ಲಾಸ್ಟಿಕ್ ಕರಗುತ್ತದೆ : ನಾವು ಸಾಮಾನ್ಯವಾಗಿ ಪೆಟ್ರೋಲ್ ಅನ್ನು ಬಾಟಲಿಗೆ ತುಂಬಿಸುವುದಾದರೆ ಮಿನರಲ್ ವಾಟರ್ ಬಾಟಲ್ ಗೆ ತುಂಬಿಸ್ತೀವಿ. ಈ ಬಾಟಲ್ ಗಳು ಪಾಲಿಥೈಲೀನ್ ಟೆರಫ್ತಾಲೇಟ್ (ಪಿಇಟಿ) ನಿಂದ ಮಾಡಲ್ಪಟ್ಟಿವೆ. ಇವು ಪೆಟ್ರೋಲ್ ನಲ್ಲಿ ಕರಗುತ್ತವೆ. ಪಿಇಟಿ ಬಾಟಲ್ ನಲ್ಲಿ ತುಂಬಿಸಿದಾಗ ಅದು ಕರಗಿ ಪೆಟ್ರೋಲ್ ಲೀಕ್ ಆಗುತ್ತದೆ. ಇದು ಅಪಾಯಕಾರಿ.

3) ಅಸಾಮಾಜಿಕ ಅಂಶಗಳು ಅಥವಾ ಅನ್ ಸೋಶಿಯಲ್ ಎಲಿಮೆಂಟ್ಸ್ : ಸಮಾಜದ ಶಾಂತಿ ಕದಲುವ ಘಟನೆಗಳಲ್ಲಿ ಬಳಸಲಾಗುತ್ತದೆ. ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಸಣ್ಣಪುಟ್ಟ ಬ್ಲಾಸ್ಟ್ ಮಾಡೋದು, ವಾಹನಗಳನ್ನು ಸುಡುವುದು , ಬೆಂಕಿ ಹಚ್ಚುವುದು ಮೊದಲಾದ ದುಷ್ಕೃತ್ಯಗಳಿಗೆ ಬಳಕೆ ಮಾಡಿದವುದರಿಂದ ಬಾಟಲಿಗೆ ತುಂಬಿಸುವುದಿಲ್ಲ‌.

4) ಅಪಾಯಕಾರಿಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ತಗಲುವ ಸಂಭವ ಇರುವುದರಿಂದ ಪ್ಲಾಸ್ಟಿಕ್ ಬಾಟಲಿಗಳಿಗೆ ಪೆಟ್ರೋಲ್ ತುಂಬಿಸಬಾರದು.

LEAVE A REPLY

Please enter your comment!
Please enter your name here