ಕೋವಿಡ್-19 ದ್ವಿತೀಯ ಅಲೆ ಭಾರತದಾದ್ಯಂತ ಜನರಿಗೆ ಸಾಕಷ್ಟು ಸಂಕಷ್ಟ ಸೃಷ್ಠಿಸಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ, ಆಮ್ಲನಜಕದ ಸಿಲಿಂಡರ್‌ಗಳ ãಕೊರತೆ ಎದುರಾಗುತ್ತಿದೆ. ತೊಂದರೆಯಲ್ಲಿರುವ ಜನರ ನೆರವಿಗೆ ಅನೇಕ ಕ್ರೀಡಾಪಟುಗಳು ನೆರವು ನೀಡುತ್ತಿದ್ದಾರೆ. ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕೂಡ ಕೋವಿಡ್-19 ವಿರುದ್ಧದ ಪರಿಹಾರಕ್ಕೆ ಕೈ ಸೇರಿಸಿದ್ದಾರೆ.
ಟೀಮ್ ಇಂಡಿಯಾ ಒಂದು ಏಕದಿನ ವಿಶ್ವಕಪ್ ಮತ್ತು ಒಂದು ಟಿ20 ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣರಾಗಿದ್ದ ಯುವರಾಜ್ ಸಿಂಗ್ ದೇಶದ ಜನ ಸಂಕಷ್ಟಕ್ಕೆ ಸಿಲುಕಿದಾಗ ಕೈಲಾದ ನೆರವು ನೀಡುತ್ತಾ ಬಂದಿದ್ದಾರೆ. ತನ್ನದೇ ಚಾರಿಟಿಗಳ ಮೂಲಕ ಯುವಿ ನೆರವಿನ ಹಸ್ತ ಚಾಚುತ್ತಲೇ ಇದ್ದಾರೆ. ಈ ಬಾರಿ ಯುವಿ ಮತ್ತೊಂದು ಕಾರ್ಯಕ್ರಮದೊಂದಿಗೆ ಬಂದಿದ್ದಾರೆ.
ಯುವರಾಜ್ ಅವರ ಯುವಿಕ್ಯಾನ್ (YouWeCan) ಹೆಸರಿನ ಚಾರಿಟಿ ಸಂಸ್ಥೆಯ ಮೂಲಕ ಸಿಂಗ್ ಅವರು #Mission1000Beds ಹೆಸರಿನ ಕಾರ್ಯಕ್ರಮ ಆರಂಭಿಸಿದ್ದಾರೆ. ಭಾರತದಾದ್ಯಂತ ಆಸ್ಪತ್ರೆಗಳಲ್ಲಿ ಕ್ರಿಟಿಕಲ್ ಕೇರ್ ಸೌಲಭ್ಯಗಳನ್ನು ಹೆಚ್ಚಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
ಯುವಿ ಈ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿದ್ದಾರೆ. ‘ಕ್ರಿಟಿಕಲ್ ಕೇರ್ ಬೆಡ್ ಮತ್ತು ಸಲಕರಣೆಗಳೊಂದಿಗೆ ಕಳೆದ ಸಂಜೆ ದೆಹಲಿಯಿಂದ ಟ್ರಕ್ ಹಿಮಾಚಲ ಪ್ರದೇಶಕ್ಕೆ ಹೊರಟಿದೆ. ಭಾರತದಾದ್ಯಂತ ಆರೋಗ್ಯ ಸೌಲಭ್ಯ ಹೆಚ್ಚಿಸುವ ನಮ್ಮ ಪಯಣಕ್ಕೆ ಬೆಂಬಲಿಸಿ’ ಎಂದು ಯುವಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.