ಧಾರವಾಡ : ರಕ್ತದಾನ ಮಹಾದಾನ ಅಂತ ಹೇಳ್ತಾರೆ. ಹೀಗಾಗಿ ಧಾರವಾಡದ ಶ್ರೀ ಗುರುದೇವ ಆತ್ಮಾನಂದ ಆಶ್ರಮ ರಾಘವೇಂದ್ರ ನಗರ ಧಾರವಾಡ ಶ್ರೀ ಸದ್ಗುರು ಸಮರ್ಥ ಶಿವಾನಂದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶ್ರೀ ಗುರುದೇವ ಆತ್ಮಾನಂದ ಸದ್ಭಕ್ತ ಮಂಡಳಿ ಯುವತಿ ಧಾರವಾಡ ನವನಗರ ಕ್ಯಾನ್ಸರ್ ಹಾಸ್ಪಿಟಲ್ ಡಾಕ್ಟರ ಉಮೇಶ್ ಹಳ್ಳಿಕೇರಿ ರೋಗಿಗಳ ಸಹಾಯಾರ್ಥವಾಗಿ ರಕ್ತದಾನವನ್ನು ಮಾಡಲಾಯಿತು. ಕಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ಅನುಕೂಲವಾಗಲೆಂದು ಸಾಕಷ್ಟು ಜನರು ಬಂದು ರಕ್ತದಾನ ಮಾಡಿ ಹೋದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಈರಣ್ಣ ಸತ್ಯನವರ್ ಶ್ರೀ ಹನುಮಂತ್ ರಾಮಣ್ಣವರ ಶಿವಾನಂದ ಆನೆ ಕಿವಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಜೊತೆಗೆ ಸುಮಾರು 45 ಜನ ರಕ್ತದಾನವನ್ನು ಮಾಡಿದರು. ಇದೇ ವೇಳೆ ಪ್ರಸಾದ ವ್ಯವಸ್ಥೆಯನ್ನು ಶಿವಾನಂದ್ ಶ್ರೀಶೈಲಪ್ಪ ಆನೇಕಿವಿ ಮಾಡಿದರು.