ಕ್ಯಾಶ್ ಬ್ಯಾಕ್ ಆಸೆಗೆ ಬಿದ್ದು 45,000 ರೂ ಕಳ್ಕೊಂಡ ವಿದ್ಯಾರ್ಥಿನಿ!

Date:

ಫೋನ್‌ಪೇ ಕ್ಯಾಶ್‌ಬ್ಯಾಕ್‌ ನೀಡಲಾಗುತ್ತದೆ ಎಂದು ಹೇಳಿ ಕರೆ ಮಾಡಿದ ಅಪರಿಚಿತನ ಮಾತು ನಂಬಿದ ವಿದ್ಯಾರ್ಥಿನಿಯೊಬ್ಬರು 45 ಸಾವಿರ ರೂ. ಕಳೆದುಕೊಂಡಿದ್ದಾರೆ.
ನಗರದ ಜೆ.ಸಿ. ರಸ್ತೆಯಲ್ಲಿ ನೆಲೆಸಿರುವ 22 ವರ್ಷದ ವಿದ್ಯಾರ್ಥಿನಿಗೆ ಜ.26ರಂದು ಅಪರಿಚಿತ ವ್ಯಕ್ತಿ ಫೋನ್‌ ಮಾಡಿದ್ದ. ನಾನು ಫೋನ್‌ಪೇ ಆಫೀಸಿನಿಂದ ಕರೆ ಮಾಡುತ್ತಿದ್ದೇನೆ. ನಿಮಗೆ ಫೋನ್‌ಪೇ ಕ್ಯಾಶ್‌ ಬ್ಯಾಕ್‌ ಬಂದಿದ್ದು, ಕ್ಲೇಮ್‌ ಮಾಡಿಕೊಳ್ಳಬಹುದು ಎಂದಿದ್ದಾನೆ. ಆತನ ಮಾತುಗಳನ್ನು ವಿದ್ಯಾರ್ಥಿನಿ ನಂಬಿದ್ದರು. ಆದರೆ, ಕ್ಯಾಶ್‌ ಬ್ಯಾಕ್‌ ಪಡೆದುಕೊಳ್ಳಲು ಪ್ರೊಸೆಸಿಂಗ್‌ ಶುಲ್ಕ ಕಟ್ಟಬೇಕು ಎಂದು ಹೇಳಿದ ಅಪರಿಚಿತ ವ್ಯಕ್ತಿ, ವಿದ್ಯಾರ್ಥಿನಿಯ ಎಸ್‌ಬಿಐ ಬ್ಯಾಂಕ್‌ ಖಾತೆಯಿಂದ ಹಂತ ಹಂತವಾಗಿ ಒಟ್ಟು 45,010 ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ.
ಕ್ಯಾಶ್‌ ಬ್ಯಾಕ್‌ ನೀಡುತ್ತೇನೆಂದು ಹೇಳಿ ಬೇರೆ ಬೇರೆ ಶುಲ್ಕಗಳ ನೆಪದಲ್ಲಿ ಆರೋಪಿ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಲೇ ಇದ್ದ. ಅನುಮಾನಗೊಂಡ ವಿದ್ಯಾರ್ಥಿನಿ ಈ ಕುರಿತು ಬೇರೆ ಕಡೆ ವಿಚಾರಿಸಿದ ವಂಚನೆಯಾಗಿರುವುದು ಗೊತ್ತಾಗಿದೆ. ಸದ್ಯ ಕೇಂದ್ರ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 

Share post:

Subscribe

spot_imgspot_img

Popular

More like this
Related

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್ ರನ್ ಪ್ರಕರಣ!

ಬಿಗ್ ಬಾಸ್ ಮಾಜಿ ಸ್ಪರ್ಧಿ ದಿವ್ಯ ಸುರೇಶ್ ವಿರುದ್ಧ ಹಿಟ್ ಅಂಡ್...

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ ಸಜೀವ ದಹನ

ಕರ್ನೂಲ್ ನಲ್ಲಿ ಖಾಸಗಿ ಬಸ್ ಹೊತ್ತಿ ಉರಿದು 10ಕ್ಕೂ ಹೆಚ್ಚು ಮಂದಿ...

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...