ಕ್ರಿಕೆಟ್‍ನಲ್ಲೂ ಧರ್ಮದ ಕಿತ್ತಾಟ; ಕ್ರಿಶ್ಚಿಯನ್ ಯುವಕ ಮೈದಾನದಿಂದ ಔಟ್

Date:

ದೇವಸ್ಥಾನಕ್ಕೆ ಸೇರಿದ ಜಾಗದಲ್ಲಿ ಕ್ರಿಕೆಟ್ ಆಟವಾಡಿದ ಎಂಬ ಒಂದೇ ಕಾರಣಕ್ಕಾಗಿ, ಒಂದು ಕೋಮಿನ ಯುವಕನನ್ನು ವ್ಯಕ್ತಿಯೋರ್ವ ಮೈದಾನದಿಂದ ಹೊರಗೆ ಕಳುಹಿಸಿದ ಅಮಾನವೀಯ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಯನಗರ ಎಂಬಲ್ಲಿ ನಡೆದಿದೆ.

ಜಯನಗರದ ಕೊರಗಜ್ಜ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದದಲ್ಲಿ ಸ್ಥಳೀಯ ಯುವಕ ಲೋಕೇಶ್ ಮತ್ತು ಆತನ ಕ್ರೈಸ್ತ ಗೆಳೆಯ ಸೇರಿದಂತೆ ಇತರರು ಕ್ರಿಕೆಟ್ ಆಡುತ್ತಿದ್ದರು. ಆಟದ ತಂಡದಲ್ಲಿ ಕ್ರೈಸ್ತ ಯುವಕ ಇದ್ದ ಒಂದೇ ಕಾರಣಕ್ಕೆ ಸ್ಥಳೀಯ ವ್ಯಕ್ತಿ ಪ್ರವೀಣ್ ಎಂಬಾತ ಆಟವನ್ನು ತಡೆದಿದ್ದಾನೆ. ಹಿಂದೂವಲ್ಲದವನು ಆಟ ಆಡಬಾರದು ಎಂದು ತಾಕೀತು ಮಾಡಿದ್ದಾನೆ.

ಮಸೀದಿ, ಚರ್ಚ್‌ಗಳ ಪ್ರದೇಶಗಳಲ್ಲಿ ಹಿಂದೂಗಳು ಆಡಿದರೆ, ಅವರು ಬಿಡುವುದಿಲ್ಲ. ಹಾಗಾಗಿ ಹಿಂದೂ ಜಾಗದಲ್ಲಿ ಕ್ರೈಸ್ತ ಕೂಡಾ ಆಡಬಾರದು ಎಂದು ಗದರಿಸಿದ್ದಾನೆ. ಇದಕ್ಕೆ ಜೊತೆಗಿದ್ದ ಆಟಗಾರರು ಕ್ರೈಸ್ತ ಯುವಕನ ಪರ ನಿಂತು ಆಟದಲ್ಲಿ ಧರ್ಮ ಯಾವುದಯ್ಯಾ ಅಂತಾ ಜೊತೆಗೆ ನಿಂತಿದ್ದಾರೆ. ಈ ವೇಳೆ ಕ್ರೈಸ್ತ ಯುವಕ ತಾನು ಆಡಿರುವ ಬಗ್ಗೆ ಸಮರ್ಥನೆ ನೀಡಲು ಬಂದಾಗ ಪ್ರವೀಣ್, ಕ್ರೈಸ್ತ ಯುವಕನ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾನೆ ಮತ್ತು ಬಲವಂತವಾಗಿ ಮೈದಾನದಿಂದ ಹೊರಗೆ ಕಳುಹಿಸಿದ್ದಾನೆ.

 

ನಾನು ಶಾಸಕರ ಜೊತೆ ಮಾತನಾಡಿಯೇ ಹೊರಗೆ ಕಳುಹಿಸುತ್ತಿದ್ದೇನೆ ಎಂದೂ ಈ ಸಂದರ್ಭದಲ್ಲಿ ಪ್ರವೀಣ್ ಹೇಳಿದ್ದಾನೆ. ಈ ಎಲ್ಲಾ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ. ಆಟದಲ್ಲೂ ಧರ್ಮವನ್ನು ಎಳೆದು ತಂದು, ಅವಮಾನ ಮಾಡಿದ ಪ್ರವೀಣ್ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...