ಆಸ್ಟ್ರೇಲಿಯಾ ವಿರುದ್ಧದ ರಾಂಚಿಯಲ್ಲಿ ನಡೆದ 3ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಡಿದ್ದರ ವಿರುದ್ಧವಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಪತ್ರ ಬರೆದು ಬಿಸಿಸಿಐ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು.
ಇದೀಗ ಪಾಕಿಸ್ತಾನದ ಈ ಡೊಂಗಿ ಆರೋಪಕ್ಕೆ ಖಡಕ್ ಆಗಿ ಸ್ಪಷ್ಟನೆಯನ್ನು ನೀಡಿರುವ ಬಿಸಿಸಿಐ ವಕ್ತಾರರು, ನಾವು ಐಸಿಸಿ ನಿಂದ ಅನುಮತಿ ಪಡೆದೆ ಆಟಗಾರರಿಗೆ ಕ್ಯಾಪ್ ಧರಿಸಲು ಅವಕಾಶ ನೀಡಿದ್ದೇವೆ. ಅಲ್ಲದೇ ಐಸಿಸಿ ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮಾತ್ರವಲ್ಲದೆ ಎಲ್ಲಾ ಆಟಗಾರರು ಪಂದ್ಯದ ಸಂಭಾವನೆಯನ್ನ ದೇಣಿಗೆ ರೂಪದಲ್ಲಿ ಸಂಗ್ರಹ ಮಾಡಲು ಕೂಡ ಅನುಮತಿ ನೀಡಿತ್ತು ಎಂದು ಸ್ಪಷ್ಟಪಡಿಸುವುದರ ಮೂಲಕ ಐಸಿಸಿ ಗೆ ದೂರು ಸಲ್ಲಿಸಿದ ಪಾಪಿ ಪಾಕಿಸ್ತಾನಕ್ಕೆ ಅಲ್ಲೂ ಕೂಡ ಮುಖಭಂಗ ಆಗುವಂತೆ ಮಾಡಿದೆ.
ಇಷ್ಟೆಲ್ಲ ಆದ್ರೂ ಸಹ ಮಾನ ಮರ್ಯಾದೆಯನ್ನು ಬಿಟ್ಟ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಎಹಶಾನ್ ಮಣಿ ತನ್ನ ಮೊಂಡು ವಾದವನ್ನು ಮುಂದುವರಿಸಿ, ಕ್ರೀಡೆ ಹಾಗೂ ಕ್ರಿಕೆಟ್ಟನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂದಿದ್ದಾರೆ. ಅಲ್ಲದೇ ಬಿಸಿಸಿಐ ಈ ನಡೆಯಿಂದ ವಿಶ್ವ ಕ್ರಿಕೆಟಿನಲ್ಲಿ ಭಾರತ ವಿಶ್ವಾಸರ್ಹತೆಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ ಅಲ್ಲದೆ ಬಿಸಿಸಿಐ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡೋ ಮೂಲಕ ನಾಚಿಕೆ ಇಲ್ಲದಂತೆ ವರ್ತಿಸುತ್ತಿರುವುದು ಇದೀಗ ಎಲ್ಲೆಡೆ ಟೀಕೆಗೆ ಗುರಿಯಾಗುವಂತೆ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ರಾಂಚಿಯಲ್ಲಿ ನಡೆದ 3ನೇ ಏಕದಿನ ಕ್ರಿಕೆಟ್ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಟವಾಡುತ್ತಿರುವುದು ಖುಷಿ ತಂದಿದೆ, ಈ ಮೂಲಕ ನಮ್ಮ ಸೇನೆಗೆ ನಾವು ಗೌರವ ನೀಡುಲು ಅವಕಾಶ ಲಭಿಸಿದೆ. ಅಲ್ಲದೇ ಎಲ್ಲಾ ಆಟಗಾರರು ಪಂದ್ಯದ ಸಂಭಾವನೆಯನ್ನು ಯೊಧರ ಪರಿಹಾರ ನಿಧಿಗೆ ನೀಡುತ್ತೇವೆ ಎಂದು ಹೇಳಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.