ಕನ್ನಡಿಗ ಕೆ.ಎಲ್ ರಾಹುಲ್ ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಬೆಳೆಯುತ್ತಿರುವ ಸ್ಟಾರ್ ಆಟಗಾರ. ಯುವ ಕ್ರಿಕೆಟಿಗ ರಾಹುಲ್ ಆಟಕ್ಕೆ ಇಡೀ ವಿಶ್ವಕ್ರಿಕೆಟ್ ಫಿದಾ ಆಗಿದೆ. ಟೀಮ್ ಇಂಡಿಯಾದ ಭವಿಷ್ಯದ ನಾಯಕ ಎಂದೇ ಕರಾವಳಿ ಕುವರ ಕರೆಯಲ್ಪಡುತ್ತಿದ್ದಾರೆ. ಇತ್ತೀಚೆಗೆ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಆಗಿಯೂ ಯಶ ಕಂಡಿದ್ದಾರೆ. ಬ್ಯಾಟಿಂಗ್ನಲ್ಲಿ ಬಹುತೇಕ ಆಟಗಾರರು ತಮ್ಮ ಸ್ಥಾನ ಬಿಟ್ಟು ಬೇರೆ ಸ್ಥಾನದಲ್ಲಿ ಬ್ಯಾಟಿಂಗ್ಗೆ ಇಳಿದರೆ ಸಕ್ಸಸ್ ಕಾಣುವುದು ವಿರಳ. ಆದರೆ, ರಾಹುಲ್ ಮಾತ್ರ ಹಾಗಲ್ಲ.. ಆರಂಭಿಕನಾಗಿ ಕಣಕ್ಕಿಳಿಯಲೂ ರೆಡಿ, 3ನೇ, 4ನೇ, 5ನೇ ಹೀಗೆ ಯಾವ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲರು. ಹೀಗಾಗಿ ವಿಶ್ವಕ್ರಿಕೆಟ್ ರಾಹುಲ್ ಆಟಕ್ಕೆ ಮನಸೋತಿದೆ.
ನ್ಯೂಜಿಲೆಂಡ್ ವಿರುದ್ಧ ರಾಹುಲ್, ವಿಕೆಟ್ ಕೀಪರ್ ಆಗಿ ಉತ್ತಮ ಸಾಧನೆ ತೋರಿದ್ದರು. ಅಷ್ಟೇ ಅಲ್ಲದೆ ಅವರು ಓಪನರ್, ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಜೊತೆಗೆ ಕಿವೀಸ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ವಿರಾಟ್ ವಿಶ್ರಾಂತಿ ಪಡೆದಾಗ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್ ಶರ್ಮಾ ಗಾಯಗೊಂಡು ಪಂದ್ಯದಿಂದ ಹೊರಗುಳಿದಾಗ ಕೆ.ಎಲ್.ರಾಹುಲ್ ನಾಯಕತ್ವದ ಜವಾಬ್ದಾರಿ ನಿರ್ವಹಿಸಿ ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು.
ರಾಹುಲ್ ಆಟವನ್ನೀಗ ವೆಸ್ಟ್ ಇಂಡೀಸ್ ದಂತಕಥೆ , ಸದ್ಯ ರೋಡ್ ಸೇಫ್ಟಿ ಕ್ರಿಕೆಟ್ ಲೆಜೆಂಡ್ಸ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸುತ್ತಿರುವ ಬ್ರಿಯಾನ್ ಲಾರಾ ಮಿಸ್ಟರ್ 360 ರಾಹುಲ್ ಅವರನ್ನು ಹಾಡಿಹೊಗಳಿದ್ದಾರೆ. ಲಾರಾಗೆ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ಫೇವರೇಟ್ ಆಟಗಾರರಂತೆ.
ನಿಮಗೆ ತಿಳಿದಿರುವಂತೆ ನಾನು ವೆಸ್ಟ್ ಇಂಡೀಸ್ ತಂಡವನ್ನು ಹೊಗಳುತ್ತೇನೆ. ವಿಂಡೀಸ್ ತಂಡವು ಶ್ರೀಲಂಕಾದಲ್ಲಿ ಟಿ20 ಸರಣಿಯನ್ನು ಉತ್ತಮವಾಗಿ ಆಡುತ್ತಿದ್ದಾರೆ. ಪ್ರಪಂಚದಾದ್ಯಂತ ಅದ್ಭುತ ಬ್ಯಾಟ್ಸ್‌ಮನ್‍ಗಳಿದ್ದಾರೆ. ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಬರುತ್ತಾರೆ. ಆದರೆ ನನ್ನ ನೆಚ್ಚಿನ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್” ಎಂದು ಲಾರಾ ಮುಕ್ತಕಂಠದಿಂದ ನುಡಿದಿದ್ದಾರೆ.