ಮುಂದಿನ ವರ್ಷದಿಂದ ಮಹಿಳಾ ಐಪಿಎಲ್? ಗಂಗೂಲಿ ನಿರ್ಧಾರದತ್ತ ಎಲ್ಲರ ಚಿತ್ತ!

0
344

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವಕ್ರಿಕೆಟಿನ ಜನಪ್ರಿಯ ಟೂರ್ನಿಯಾಗಿದೆ. ಮಾರ್ಚ್​ 29ರಿಂದ ಈ ಬಾರಿಯ ಟೂರ್ನಿ ನಡೆಯುತ್ತಿದೆ. ಇನ್ನು ಮುಂದೆ ಮಹಿಳಾ ಐಪಿಎಲ್ ಟೂರ್ನಿ ಕೂಡ ಆರಂಭವಾಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಭಾರತ ಮಹಿಳಾ ಕ್ರಿಕೆಟ್ ತಂಡ ಅದ್ಭುತ ಪ್ರದರ್ಶನ ನೀಡುತ್ತಿರುವುದರಿಂದ ಮಹಿಳಾ ಐಪಿಎಲ್ ಆರಂಭಿಸುವ ಚಿಂತನೆಗೂ ಬಲ ಸಿಕ್ಕಂತಾಗಿದೆ.


ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿ ಮಿಂಚಿದ್ರು. ಹರ್ಮಾನ್ ಪ್ರೀತ್ ಕೌರ್ ನೇತೃತ್ವದ ತಂಡ ಪ್ರಶಸ್ತಿಗೆ ಮುತ್ತಿಕ್ಕದಿದ್ದರೂ ಭಾರತೀಯರ ಮನಸ್ಸಲ್ಲಿ ಚಾಂಪಿಯನ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ಪ್ರತಿಭೆಗಳ ಅನಾವರಣಕ್ಕೆ ಐಪಿಎಲ್ ವೇದಿಕೆ ಆಗಲಿದೆ ಎಂಬ ಚರ್ಚೆ ಬಲವಾಗಿದೆ.
ಆಸ್ಟ್ರೇಲಿಯಾ 5 ಬಾರಿ ಮಹಿಳಾ ಬಿಗ್​ ಬ್ಯಾಶ್​ ಲೀಗ್, ಇಂಗ್ಲೆಂಡ್​ ಕಿಯಾ ಸೂಪರ್ ಲೀಗ್ ಎಂಬ ಮಹಿಳಾ ಟಿ20 ಲೀಗನ್ನು 4ಬಾರಿ ಆಯೋಜಿಸಿ ಯಶಸ್ವಿಯಾಗಿದ್ದು, ಭಾರತ ಐಪಿಎಲ್ ಆಯೋಜಿಸಿದರೆ ಖಂಡಿತಾ ಕ್ಲಿಕ್ ಆಗುತ್ತದೆ ಎಂಬ ಅಭಿಪ್ರಾಯ ಹೆಚ್ಚಿದೆ.ಮಹಿಳಾ ವಿಶ್ವಕಪ್ ಮುಗಿಯುತ್ತಿದ್ದಂತೆ ಟೀಮ್ ಇಂಡಿಯಾ ಮಾಜಿ ನಾಯಕ ಸುನೀಲ್ ಗವಾಸ್ಕರ್ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಮಾತನಾಡಿದ್ದರು.

2021ರಿಂದ ಮಹಿಳಾ ಐಪಿಎಲ್ ಟೂರ್ನಿ ಆರಂಭಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಸಲಹೆ ನೀಡಿದ್ದ ಅವರು, ಭಾರತೀಯ ಮಹಿಳಾ ಕ್ರಿಕೆಟಿನಲ್ಲಿ ಅತ್ಯುತ್ತಮ ಆಟಗಾರ್ತಿಯರಿದ್ದಾರೆ. ಮಹಿಳಾ ಐಪಿಎಲ್ ನಡೆದಲ್ಲಿ ಅವರಿಗೆ ಮತ್ತಷ್ಟು ಹೆಚ್ಚು ಸಹಕಾರಿ ಆಗಲಿದೆ. ಹೊಸ ಪ್ರತಿಭೆಗಳ ಅನ್ವೇಷಣೆ ಮೂಲಕ ಮತ್ತಷ್ಟೂ ಬಲಿಷ್ಠ ಭಾರತ ರಾಷ್ಟ್ರೀಯ ತಂಡವನ್ನು ಕಟ್ಟಲು ಸಾಧ್ಯ ಎಂದಿದ್ದರು. ಗಂಗೂಲಿ ಅಂಗಳದಲ್ಲಿ ಮಹಿಳಾ ಐಪಿಎಲ್ ಚಿಂತನೆ ಇದ್ದು, ಅವರ ನಿರ್ಧಾರ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here