ಕ್ರಿಕೆಟ್ ದೇವರು ಅಂತಲೂ ನೋಡದೇ ಸಚಿನ್​ಗೆ ಬೈದ ಧೋನಿ ಫ್ಯಾನ್ಸ್..!

Date:

ಸಚಿನ್ ತೆಂಡೂಲ್ಕರ್ ವಿಶ್ವಕ್ರಿಕೆಟ್​ನ ದಿಗ್ಗಜ. ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುತ್ತಾರೆ. ವಿಶ್ವಕ್ರಿಕೆಟ್​ನಲ್ಲಿ ಅತೀ ಹೆಚ್ಚು ರನ್ ಗಳಿಕೆ ಸೇರಿದಂತೆ ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದಿರುವ ಆಟಗಾರ. ಕಿರಿಯ ವಯಸ್ಸಲ್ಲೇ ಟೀಮ್ ಇಂಡಿಯಾ ಪರ ಬ್ಯಾಟ್ ಹಿಡಿದು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬಹುದೊಡ್ಡ ತಾರೆಯಾಗಿ ಬೆಳೆದಿರುವ ಆಟಗಾರ. ಸಚಿನ್ ಕ್ರಿಕೆಟ್​ಗೆ ರಾಜೀನಾಮೆ ನೀಡಿ ಬಹುಕಾಲವಾಗಿದ್ದರೂ ಸಚಿನ್ ಅವರನ್ನು ಇಂದಿಗೂ ಪೂಜಿಸುವ ಮಂದಿ ಇದ್ದಾರೆ. ಆದರೆ, ಸಚಿನ್ ಮೇಲೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.
ಹೌದು, ಕ್ರಿಕೆಟ್​ ದೇವರು ಅಂತಲೂ ನೋಡದೇ ಮಹೇಂದ್ರ ಸಿಂಗ್ ಧೋನಿಯ ಅಭಿಮಾನಿಗಳು ಸಚಿನ್ ತೆಂಡೂಲ್ಕರ್ ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿನ್​ ಏನು ದೊಡ್ಡ ಹಿಟ್ಟರ್ ಆಗಿದ್ರಾ ಎಂದು ಧೋನಿ ಫ್ಯಾನ್ಸ್ ಕಿಡಿಕಾರಿದ್ದಾರೆ.
ಅಫ್ಘಾನಿಸ್ತಾನ್​ ವಿರುದ್ಧದ ಪಂದ್ಯದಲ್ಲಿ ಧೋನಿಯ ನಿಧಾನ ಗತಿಯ ಬ್ಯಾಟಿಂಗ್ ಅನ್ನು ಸಚಿನ್ ತೆಂಡೂಲ್ಕರ್ ಟೀಕಿಸಿದ್ದರು. 52 ಎಸೆತಗಳಲ್ಲಿ ಧೋನಿ ಕೇವಲ 28ರನ್ ಮಾಡಿದ್ರು. ಈ ಬಗ್ಗೆ ಸಚಿನ್ ತೆಂಡೂಲ್ಕರ್ ಅಸಮಧಾನ ಹೊರ ಹಾಕಿದ್ರು. ಧೋನಿ , ಕೇದಾರ್​ ಜಾಧವ್​ ಜೊತೆಗೂಡಿ ಉತ್ತಮ ಜೊತೆಯಾಟ ಆಡಬಹುದಿತ್ತು ಎಂದು ಸಚಿನ್ ಹೇಳಿದ್ದರು. ಅದಲ್ಲದೆ ಧೋನಿ ಕೇದಾರ್ ಜಾಧವ್​​ ಜೊತೆ ಸೇರಿ ಉತ್ತಮ ಇನ್ನಿಂಗ್ಸ್​ ಕಟ್ಟಬಹುದಿತ್ತು ಎಂದಿದ್ದರು. ಸಚಿನ್ ಅವರ ಈ ಮಾತುಗಳು ಧೋನಿ ಅಭಿಮಾನಿಗಳನ್ನು ಕೆರಳಿಸಿದೆ.
ಸಚಿನ್ ಅವರ ವಿರುದ್ಧ ಫುಲ್ ಗರಂ ಆಗಿರುವ ಧೋನಿ ಫ್ಯಾನ್ಸ್ ”ಸಚಿನ್​ ಏನು ದೊಡ್ಡ ಹಿಟ್ಟರ್ ಆಗಿದ್ರಾ. ಅವರು ಬರೀ ದಾಖಲೆಗಳಿಗಾಗಿ ಆಡುತ್ತಿದ್ದವರು. ಧೋನಿ ನಾಯಕತ್ವದಲ್ಲಿ ಭಾರತ ಟಿ20, ಏಕದಿನ ವಿಶ್ವಕಪ್ ಗೆದ್ದಿದೆ. ಚಾಂಪಿಯನ್​ ಟ್ರೋಫಿ ಗೆದ್ದಿದೆ. ಹೀಗಾಗಿ ತೆಂಡೂಲ್ಕರ್​​ಗಿಂತ ಧೋನಿಯೇ ಗ್ರೇಟ್ ಪ್ಲೇಯರ್ ಎಂದು ಕಿಡಿಕಾರಿದ್ದಾರೆ.

Share post:

Subscribe

spot_imgspot_img

Popular

More like this
Related

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ

ಫೆ.23ರಂದು ಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ: ಗದ್ದುಗೆ ಉದ್ಘಾಟನೆ, ಪಟ್ಟಾಭಿಷೇಕದಲ್ಲಿ ಭಾಗಿ ಮಂಡ್ಯ:...

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ

ಚಳಿಗಾಲದಲ್ಲೇಕೆ ಕೀಲು ನೋವು ಹೆಚ್ಚಾಗಿ ಕಂಡುಬರುತ್ತೆ ಗೊತ್ತಾ? ಇಲ್ಲಿದೆ ಉತ್ತರ ಚಳಿಗಾಲದಲ್ಲಿ ಅನೇಕರು...

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ...

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ ಬೆಂಗಳೂರು:...