ಖ್ಯಾತ ನಟಿ ಸರಿತಾ ಅವರಿಗೆ ಕುಡುಕ ಗಂಡನಿಂದ ನಿತ್ಯ ಕಿರುಕುಳ.! ಸ್ಟಾರ್ ನಟಿ ಸ್ಥಿತಿ ಚಿಂತಾಜನಕ..

Date:

ಜೀವನವೆಂಬುದು ಸೆಲೆಬ್ರಿಟಿ ಮತ್ತು ಬಡ ವ್ಯಕ್ತಿ ಎಂದು ಭೇದಭಾವ ಮಾಡುವುದಿಲ್ಲ ಎಲ್ಲರಿಗೂ ಸಹ ಸುಖ ಮತ್ತು ಎಲ್ಲರಿಗೂ ಸಹ ಕಷ್ಟವನ್ನು ನೀಡುತ್ತದೆ. ಅದಕ್ಕೆ ಹೇಳೋದು ಜೀವನ ಎಲ್ಲರಿಗೂ ಸಹ ತಕ್ಕ ಪಾಠವನ್ನು ಮತ್ತು ವಿಚಿತ್ರವಾದ ಅನುಭವಗಳನ್ನು ನೀಡುತ್ತದೆ ಎಂದು. ಇನ್ನು ಒಂದು ಕಾಲದಲ್ಲಿ ಖ್ಯಾತ ನಟಿಯಾಗಿ ಮೆಚ್ಚಿದ್ದ ಸರಿತಾ ಅವರ ಜೀವನೋತ್ಸಾಹ ಸುಖ ಮತ್ತು ದುಃಖಗಳಿಂದ ಕೂಡಿದೆ. ತೆರೆ ಮೇಲೆ ಸ್ಟಾರ್ ಆಗಿ ಮಿಂಚಿದ್ದ ಸರಿತಾ ಅವರ ಜೀವನ ಅಷ್ಟೊಂದು ಸುಖಮಯವಾಗಿ ಇರಲಿಲ್ಲ. ಹೌದು ಹದಿನಾರನೇ ವಯಸ್ಸಿಗೆ ತೆಲುಗಿನ ಪ್ರಸಿದ್ಧ ನಟ ವೆಂಕಟಸುಬ್ಬಯ್ಯ ಅವರನ್ನು ಸರಿತಾ ಅವರು ಮದುವೆಯಾಗುತ್ತಾರೆ ಆದರೆ ಆರೇ ತಿಂಗಳಿಗೆ ಆತನ ಕಿರುಕುಳ ತಾಳಲಾರದೆ ವಿಚ್ಛೇದನ ಪಡೆದುಕೊಳ್ಳುತ್ತಾರೆ.

ಹೀಗೆ ಚಿಕ್ಕ ವಯಸ್ಸಿಗೆ ಮದುವೆಯಾಗಿ ತದನಂತರ ವಿಚ್ಛೇದನವನ್ನು ಪಡೆದುಕೊಂಡ ಸರಿತಾ ಅವರು ಬರೋಬ್ಬರಿ 12 ವರ್ಷಗಳ ಕಾಲ ಯಾವ ಮದುವೆಯೂ ಬೇಡ ಯಾವ ಸಂಸಾರವೂ ಬೇಡ ಎಂದು ಉಳಿದುಕೊಂಡು ಬಿಡುತ್ತಾರೆ. ಹೀಗೆ ಒಬ್ಬಂಟಿಯಾಗಿ ಜೀವನವನ್ನು ಸಾಗಿಸುತ್ತಿದ್ದ ಸರಿದ ಅವರ ಬಾಳಲ್ಲಿ ಮತ್ತೊಬ್ಬ ನಟನ ಎಂಟ್ರಿ ಆಗುತ್ತದೆ ಹೌದು ಮಲಯಾಳಂನ ನಟ ಮುಖೇಶ್ ಅವರು ಸರಿತಾ ಅವರ ಬಾಳಿಗೆ ಕಾಲಿಡುತ್ತಾರೆ. ಹೀಗೆ ಮುಖೇಶ್ ಅವರ ಜೊತೆ ವೈವಾಹಿಕ ಜೀವನವನ್ನು ಆರಂಭಿಸಿದ ಸರಿತಾ ಅವರ ಜೀವನ ಸುಖಕರವಾಗಿ ಆರಂಭವಾಗುತ್ತದೆ.

ದಿನಕಳೆದಂತೆ ಎರಡನೇ ಗಂಡನೂ ಸಹ ಸರಿತಾ ಅವರಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸುತ್ತಾನೆ. ಕುಡಿದು ಬಂದು ಹಿಂಸೆ ನೀಡುವುದಲ್ಲದೇ ಚಿತ್ರಗಳಲ್ಲಿ ಅಭಿನಯಿಸಬೇಡ ಎಂದು ತಾಕೀತು ಮಾಡಲಾರಂಬಿಸುತ್ತಾನೆ. ಇದರಿಂದ ಕಂಗಾಲಾದ ಸರಿತಾ ತಮ್ಮ ಮಕ್ಕಳನ್ನು ಕರೆದುಕೊಂಡು ದೂರದ ದುಬೈಗೆ ಹೊರಟುಹೋಗುತ್ತಾರೆ. ಇತ್ತ ಮುಖೇಶ್ ಸರಿತಾ ಅವರಿಗೆ ವಿಚ್ಛೇದನವನ್ನೂ ಸಹ ನೀಡದೇ ಮತ್ತೊಂದು ಮದುವೆಯಾಗುತ್ತಾನೆ. ಇದನ್ನು ಪ್ರಶ್ನಿಸಿ ಭಾರತಕ್ಕೆ ಬಂದು ಕೇಸ್ ಹಾಕುತ್ತಾರೆ ಸರಿತಾ ಅವರು… ಆದರೆ ಆ ಕೇಸ್ ಇನ್ನೂ ಸಹ ಮುಗಿದಿಲ್ಲ. ಹೀಗೆ ಸ್ಟಾರ್ ಆಗಿ ಮಿಂಚಿದ ನಟಿ ಸರಿತಾ ಬಾಳು ಕಲ್ಲು ಮುಳ್ಳಿನ ಹಾದಿಯಾಗಿತ್ತು..

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...