ನಟಿ ಕೀರ್ತಿ ಸುರೇಶ್ ಇದೀಗ ಸಂಗೀತ ನಿರ್ದೇಶಕರೊಬ್ಬರ ಜೊತೆ ಲವ್ ನಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಸಹ ಪರಸ್ಪರ ಪ್ರೀತಿಯಲ್ಲಿ ಇದ್ದು ಈ ವರ್ಷವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ನಟಿ ಕೀರ್ತಿ ಸುರೇಶ್ ಅವರು ಈ ಹಿಂದೆ ಉದ್ಯಮಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಬಂದಿತ್ತು ಆದರೆ ತದನಂತರ ಇದಕ್ಕೆ ಕೀರ್ತಿ ಸುರೇಶ್ ಅವರೇ. ಇಟ್ಟಿದ್ದರು.
ಅದೇ ರೀತಿ ಇದೀಗ ಹೊಸದೊಂದು ಸುದ್ದಿ ಹರಿದಾಡುತ್ತಿದ್ದು ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಜೊತೆ ಕೀರ್ತಿ ಸುರೇಶ್ ಅವರು ಲವ್ ನಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಈ ಇಬ್ಬರ ಕುರಿತು ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಇದೇ ವರ್ಷವೇ ಈ ಇಬ್ಬರೂ ಸಹ ಸಪ್ತಪದಿ ತುಳಿಯಲಿದ್ದಾರೆ ಎಂಬ ಮಾಹಿತಿ ಇದೆ. ಈ ಹಿಂದೆ ನಡೆದ ಅನಿರುದ್ಧ್ ಅವರ ಬರ್ತಡೇ ಕಾರ್ಯಕ್ರಮದಲ್ಲಿ ಕೀರ್ತಿ ಸುರೇಶ್ ಅವರು ಭಾಗವಹಿಸಿದ್ದರು.
ಈ ಇಬ್ಬರು ಹುಟ್ಟುಹಬ್ಬ ಆಚರಣೆ ಮಾಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಇವರಿಬ್ಬರ ನಡುವಿನ ಪ್ರೇಮದ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆಗಳು ಶುರು ಆದವು. ಆದರೆ ಈ ಜೋಡಿ ಮಾತ್ರ ಇದುವರೆಗೂ ಸಹ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ..