ಖ್ಯಾತ ಹಿರಿಯ ನಟಿ, ನಿರ್ಮಾಪಕಿ `ಕೃಷ್ಣವೇಣಿ’ ನಿಧನ!
ತೆಲುಗು ಚಿತ್ರರಂಗದ ಜನಪ್ರಿಯ ನಟಿ, ನಿರ್ಮಾಪಕಿ ಸಿ ಕೃಷ್ಣವೇಣಿ ತಮ್ಮ 102ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ವರ ಅಗಲಿಕೆಗೆ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. 1938 ರಲ್ಲಿ ನಟನೆ ಆರಂಭಿಸಿದ ಕೃಷ್ಣವೇಣಿ ಮೊದಲು ನಟಿಸಿದ್ದು ‘ಕಚ ದೇವಯಾನಿ’ ಸಿನಿಮಾದಲ್ಲಿ.
ನಟಿಯಾಗಿರುವ ಜೊತೆಗೆ ನಿರ್ಮಾಪಕಿಯೂ ಆಗಿದ್ದ ಸಿ ಕೃಷ್ಣವೇಣಿ, ತೆಲುಗು ಚಿತ್ರರಂಗದ ದಿಗ್ಗಜ ನಟ ಎನ್ಟಿಆರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಎನ್ಟಿಆರ್ ಅವರ ಮೊದಲ ಸಿನಿಮಾ ‘ಮನ ದೇಸಂ’ ನ ನಿರ್ಮಾಪಕಿ ಆಗಿದ್ದ ಕೃಷ್ಣವೇಣಿ ಆ ಸಿನಿಮಾದಲ್ಲಿ ನಟಿಸಿದ್ದರು
ತೆಲುಗು ಚಿತ್ರರಂಗದ ಲೆಜೆಂಡರಿ ನಿರ್ದೇಶಕ ರಾಘವೇಂದ್ರ ರಾವ್ ಅವರಿಗೆ ಮೊದಲ ಅವಕಾಶವನ್ನು ಕೊಟ್ಟಿದ್ದು ಇವರೇ. ನಿರ್ಮಾಪಕಿಯಾಗಿ 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕೃಷ್ಣವೇಣಿ, 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಒಳ್ಳೆಯ ಹಾಡುಗಾರ್ತಿ ಸಹ ಆಗಿದ್ದರು.