ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಮತ್ತು ಪತಿ ಶಿಲಾದಿತ್ಯ ಎಂ ಅವರು ಶನಿವಾರ ಮಧ್ಯಾಹ್ನ ಗಂಡು ಮಗುವನ್ನು ಪಡೆದಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಗರ್ಭಿಣಿಯಾದ ಖುಷಿಯನ್ನು ಹಂಚಿಕೊಂಡಿದ್ದ ಗಾಯಕಿ ಶ್ರೇಯಾ ಘೋಷಾಲ್ ಇದೀಗ ತಮ್ಮ ಇನ್ ಸ್ಟಾಗ್ರಾಂ ಖಾತೆಯ ಮೂಲಕ ತಾವು ಗಂಡು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಖುಷಿಯಿಂದ ಹಂಚಿಕೊಂಡಿದ್ದಾರೆ.
ನಾನು ಮತ್ತು ನನ್ನ ಪತಿ ಮುದ್ದಾದ ಗಂಡುಮಗುವನ್ನು ಪಡೆದಿದ್ದೇವೆ, ಇದು ಯಾವತ್ತೂ ಆಗದಂತಹ ಅತ್ಯುತ್ತಮ ಹಾಗೂ ದೊಡ್ಡ ಅನುಭವ. ನಮಗೆ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಸಹ ಧನ್ಯವಾದಗಳು ಎಂದು ಶ್ರೇಯಾ ಘೋಶಾಲ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.