ಇಂದು ಬೆಳಗ್ಗೆ ಗಣೇಶ ಮೂರ್ತಿಯನ್ನು ತೆಗೆದುಕೊಂಡು ಹೋಗುವ ಸಮಯದಲ್ಲಿ ಭಾರಿ ಅನಾಹುತ ಒಂದು ಬೆಳಗಾವಿಯ ಭಾಗ್ಯ ನಗರದ ಮಾರ್ಗದಲ್ಲಿ ನಡೆದಿ
ಗಣಪತಿ ಮೂರ್ತಿ ಟ್ರ್ಯಾಕ್ಟರ್ನಲ್ಲಿ ತೆಗೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಜಿಲ್ಲಾಡಳಿತ ಆದೇಶವಿಲ್ಲದೆ ಗಣೇಶ ಮೂರ್ತಿಗಳನ್ನು ಸ್ಥಾಪಿಸಲು ಯಾರಿಗೂ ಅವಕಾಶವಿಲ್ಲವೆಂದು ಜಿಲ್ಲಾಡಳಿತವು ಈ ಹಿಂದೆಯೇ ಸೂಚನೆ ನೀಡಿದೆ.
ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ಇಂಥ ಅನಾಹುತಕ್ಕೆ ಕಾರಣವಾಗಿದೆ.
ಮೂರ್ತಿ 10ಅಡಿ ಎತ್ತರವಾಗಿರುವುದರಿಂದ ತಂತಿ ತಗುಲುವ ಮುನ್ಸೂಚನೆ ಇದ್ದರೂ ಭಂಡ ಧೈರ್ಯ ಮಾಡಿ ಮೂರ್ತಿ ಸಾಗಿಸುವಾಗ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತ ಅರವಿಂದ ಗದಗಕರ್, ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಹೆಸ್ಕಾಂ ಜೊತೆ ಕೈಜೋಡಿಸಲು ಮನವಿ ಮಾಡಿದ್ದಾರೆ.